ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದ ಕೆಎಸ್ ಆರ್‌ಟಿಸಿ ಬಸ್‌ನಿಲ್ದಾಣ #KSRTC BusStand ಮುಂಭಾಗದ ಮೀನುಗಾರರ ಬೀದಿಯ ಶ್ರೀಮಾರಿಯಮ್ಮ ದೇವಸ್ಥಾನದ ಮುಂಭಾಗದಲ್ಲಿ ಇತ್ತೀಚೆಗೆ ಸಾಲು ಮರಗಳನ್ನು ಕಡಿದು ವಿಶಾಲಗೊಳಿಸಿ ಮಹಾದ್ವಾರ ನಿರ್ಮಿಸಿ ಜಾತ್ರೆ ಸಹ ನಡೆಸಲಾಗಿದ್ದು, ನಿನ್ನೆ ಸಂಜೆ ಸದರಿ ಜಾಗಕ್ಕೆ ಕಿರಿದಾಗಿ ತಡೆಗೋಡೆ ನಿರ್ಮಿಸಲು ಮುಂದಾದಾಗ ಆಟೋಚಾಲಕರು ಮತ್ತು ಅಲ್ಲಿನ ನಿವಾಸಿಗಳ ನಡುವೆ ಮಾತಿನ ಚಕಮಕಿ ನಡೆದು ನೂರಾರು ಮಂದಿ ಜಮಾಯಿಸಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳೆಯರು ನಗರಸಭಾ ಸದಸ್ಯ ಮಾಜಿ ಬಾಲಕೃಷ್ಣ ಅಲಿಯಾಸ್ ಮಟನ್‌ಬಾಲು ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಸಹೋದರ ಲಕ್ಷ್ಮಣ ಹಾಗೂ ಪುತ್ರ ಸೇರಿದಂತೆ ನಾಲ್ವರ ವಿರುದ್ಧ ದೂರು ನೀಡಿದ್ದು, ನಿನ್ನೆ ರಾತ್ರಿ ಕಾರ್ತಿಕ ಮತ್ತು ಇತರರು ಬಾಲಕೃಷ್ಣ ಮೇಲೆ ಹಲ್ಲೆ ನಡೆಸಿರುತ್ತಾರೆ ಎಂದು ದೂರಲಾಗಿದೆ.
Also read: ದಾವಣಗೆರೆ | ಪೂರ್ವ ವಲಯ ಐಜಿಪಿ ಆಗಿ ಖಡಕ್ ಅಧಿಕಾರಿ ರವಿಕಾಂತೇಗೌಡ ನಿಯೋಜನೆ

ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡ ರಾದ ಎಂ.ಎ.ಅಜಿತ್, ನ್ಯಾಯವಾದಿಗಳಾದ ವೆಂಕಟೇಶ್, ಟಿ.ಚಂದ್ರೇ ಗೌಡ, ಡಿ.ಆನಂದ್, ಮಧುಸೂಧನ್, ಕುಮರಿ ಚಂದ್ರಣ್ಣ, ನಗರ ಸಭಾ ಮಾಜಿ ಸದಸ್ಯರುಗಳಾದ ಸಾವಿತ್ರಮ್ಮ, ವಿಶಾಲಾಕ್ಷಿ, ಆನಂದ್, ವಿಶ್ವೇಶ್ವರರಾವ್ ಗಾಯಕ್‌ವಾಡ್, ಮಂಜುನಾಥ್, ಸುರೇಶ್, ಧರ್ಮರಾಜ್, ರಾಮಕೃಷ್ಣ ಮತ್ತಿತರೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post