ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಅಕ್ರಮ ಮರಳು ಗಣಿಗಾರಿಕೆ ವಿಚಾರದಲ್ಲಿ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಬಸವೇಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವನ್ನು ಶಾಸಕ ಬಿ.ಕೆ. ಸಂಗಮೇಶ್ #MLA B K Sangameshwar ತಳ್ಳಿ ಹಾಕಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ತಾವು ತಮ್ಮ ಪುತ್ರನೊಂದಿಗೆ ಈ ವಿಚಾರದಲ್ಲಿ ಸ್ಪಷ್ಟನೆ ಪಡೆದಿದ್ದೇನೆ. ವೀಡಿಯೋದಲ್ಲಿ ಆ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ತಾನಲ್ಲ ಎಂದಿದ್ದಾನೆ. ಇದು ಸುಳ್ಳು ಆರೋಪವಾಗಿದೆ ಎಂದಿದ್ದಾರೆ.
ನಮ್ಮ ಕುಟುಂಬ ಬಡವರ, ದೀನ ದಲಿತರ ಸೇವೆ ಮಾಡಿಕೊಂಡು ಜನಾನುರಾಗಿಯಾಗಿ ಸೇವೆ ಮಾಡುತ್ತಿದ್ದೇವೆ. ಇದನ್ನು ಸಹಿಸದ ಬಿಜೆಪಿ-ಜೆಡಿಎಸ್ ಕುತಂತ್ರ ಮಾಡಿ ಈ ಆರೋಪ ಮಾಡಿವೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
Also read: ಅಕ್ರಮ ಬಡ್ಡಿ ವ್ಯವಹಾರ | 9 ಕಡೆ ಪೊಲೀಸರ ದಾಳಿ | ನಗದು, ಚೆಕ್ ಸೇರಿ ಅಪಾರ ವಸ್ತು ಸೀಜ್
ಅಧಿಕಾರಿ ರಾತ್ರಿ ವೇಳೆಯೇ ಹೋಗಿ ರೈಡ್ ಮಾಡುವ ಅಗತ್ಯವೇನಿತ್ತು. ಬೆಳಗಿನ ವೇಳೆ ಹೋಗಬಹುದಾಗಿತ್ತು. ರಾತ್ರಿ ತೆಗೆಯುತ್ತಿದ್ದ ಮರಳು ದೇವಾಲಯ ಹಾಗೂ ಬಡವರ ಮನೆ ಕಟ್ಟಲು ತೆಗೆಯುತ್ತಿದ್ದ ಮರಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಮಹಿಳಾ ಅಧಿಕಾರಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಪುತ್ರನ ಮೇಲೆ ಕೇಳಿಬಂದಿದೆ.
ಅಶ್ಲೀಲ ಪದ ಬಳಸಿ ರೌಡಿಸಂ ಮಾತುಗಳಲ್ಲಿ ಮಹಿಳಾ ಅಧಿಕಾರಿಗೆ ಬೈದಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ಗಣಿ ಮತ್ತು ಭೂ ವಿಜ್ಞಾನ ಮಹಿಳಾ ಅಧಿಕಾರಿಗೆ ಅಶ್ಲೀಲ ಪದಗಳಲ್ಲಿ ಶಾಸಕರ ಪುತ್ರ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ.
ಅಕ್ರಮ ಮರಳು ಗಣಿಗಾರಿಕೆ ಜಾಗದ ಮೇಲೆ ತಡರಾತ್ರಿ ರೇಡ್ ನಡೆಸಿದ ವೇಳೆ ಘಟನೆ ನಡೆದಿದೆ. ಈ ಮಹಿಳಾ ಅಧಿಕಾರಿಯು ಭದ್ರಾವತಿ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮೇಲೆ ದಾಳಿ ಮಾಡಿದ್ದರು.
ಮಹಿಳಾ ಅಧಿಕಾರಿಯ ಮೇಲೆ ಎಂಎಲ್‌ಎ ಮಗನ ದರ್ಪದ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post