ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಬೂತ್‌ನಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಇಂದು ತಮ್ಮ ಮತ ಚಲಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅದಿಕಾರ ಹಿಡಿಯಲಿದೆ. ಹಾಗೂ ಎಲ್ಲದಕ್ಕೂ ಮುಂಬರುವ 30ನೆಯ ತಾರೀಖು ಉತ್ತರ ಸಿಗಲಿದೆ ಎಂದರು.
ಬಿಜೆಪಿಯ ದುರಾಡಳಿತ ಧರ್ಮಾಧರಿತ ರಾಜಕಾರಣದಿಂದ ಭದ್ರಾವತಿಯ ಮತದಾರರು ಬೇಸತ್ತಿದ್ದು, ಕಾಂಗ್ರೆಸ್ ಬಗೆಗಿನ ಒಲವನ್ನು ಮುಂದುವರೆಸಿದ್ದಾರೆ. ಸತತ ಮೂರು ಬಾರಿ ವಿಧಾನಸಭೆಗೆ ಆರಿಸಿ ಕಳಿಸಿರುವ ನನ್ನನ್ನು ಮನೆಯ ಮಗನೆಂದೇ ಮತದಾರರು ಭಾವಿಸಿದ್ದು, ನಮ್ಮ ಕೈಬಲಪಡಿಸುವ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ನಗರಸಭೆ ಅಧಿಕಾರದ ಚುಕ್ಕಣಿಯನ್ನು ನಮ್ಮ ಕೈಗೆ ನೀಡಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ಬೂತನಗುಡಿ ಬಡಾವಣೆಯ 13ನೆಯ ವಾರ್ಡ್‌ನಲ್ಲಿ ನಗರಸಭೆ ಆವರಣದ ಬೂತ್ ನಂ. 53ರಲ್ಲಿ ಶಾಸಕರು ತಮ್ಮ ಹಕ್ಕು ಚಲಾಯಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post