ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಬಿಸಿಲಿನಿಂದ ಕಂಗೆಟ್ಟು ಹೋಗಿರುವ ಭದ್ರಾವತಿಯಲ್ಲಿ ಇಂದು ಮಧ್ಯಾಹ್ನ ಕೆಲಕಾಲ ಮಳೆಯಾಗಿದ್ದು, ಜನರು ಕೊಂಚು ನಿಟ್ಟುಸಿರು ಬಿಡುವಂತಾಗಿತ್ತು.
ಸುಮಾರು 10 ನಿಮಿಷಗಳ ಕಾಲ ಇಂದು ಮಧ್ಯಾಹ್ನ ಗಾಳಿಯಿಂದ ಕೂಡಿದ ಉತ್ತಮ ಮಳೆ ಸುರಿದಿದೆ.
Also read: ಈಶ್ವರಪ್ಪ ನಾಮಪತ್ರ ಸಲ್ಲಿಕೆ | ಸಮಯವಿದೆ, ಕಾದುನೋಡಿ | ಕುತೂಹಲ ಮೂಡಿಸಿದ ವಿಜಯೇಂದ್ರ ಹೇಳಿಕೆ
ಮಧ್ಯಾಹ್ನದಿಂದಲೇ ನಗರದಲ್ಲಿ ಮೋಡ ಮುಸುಕಿದ ವಾತಾವರಣವಿತ್ತು. ಇದರ ಬೆನ್ನಲ್ಲೇ 3.30ರ ವೇಳೆಗೆ ಸುಮಾರು 10 ನಿಮಿಷಗಳ ಕಾಲ ಜೋರಾದ ಗಾಳಿಯೊಂದಿಗೆ ಮಳೆ ಸುರಿದಿದ್ದು, ಜನರ ಮೊಗದಲ್ಲಿ ನಗು ಮೂಡಿತ್ತು. ಆದರೆ, ಹೀಗೆ ಬಂದು ಹಾಗೆ ಹೋದಂತೆ ಕೆಲವೇ ನಿಮಿಷಗಳಲ್ಲಿ ಮಳೆ ನಿಂತಿದ್ದು ಕೊಂಚ ಬೇಸರವೂ ಸಹ ಮೂಡಿಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post