ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಬಹುತೇಕ ಅಂದುಕೊಂಡಂತೇ ಆದರೆ 2025ರ ಜನವರಿ 1ರಂದು ಜನರ ಉಪಯೋಗಕ್ಕೆ ಲೋಕಾರ್ಪಣೆಯಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP B Y Raghavendra ಹೇಳಿದ್ದಾರೆ.
ರೈಲ್ವೆ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಅವರು ಮಾತನಾಡಿದರು.
ಶಿವಮೊಗ್ಗ-ಭದ್ರಾವತಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಕಡದಕಟ್ಟೆಯಲ್ಲಿರುವ ಎಲ್’ಸಿ 34 ಗೇಟ್’ನಲ್ಲಿ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ಈ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. 2022ರ ಜನವರಿಯಲ್ಲಿ ಕಾಮಗಾರಿ ಆರಂಭವಾಗಿದ್ದು, ಮುಕ್ತಾಯದ ಹಂತಕ್ಕೆ ಬಂದಿದೆ. ಈ ತಿಂಗಳಾಂತ್ಯಕ್ಕೆ ಕಾಮಗಾರಿ ಸಂಫೂರ್ಣಗೊಂಡು ಸಂಚಾರ ಮುಕ್ತವಾಗಲು ಟೆಂಡರ್’ದಾರರು ಹಸ್ತಾಂತರ ಮಾಡಲಿದ್ದಾರೆ ಎಂದರು.
Also read: ಗುರು ಹಿರಿಯರನ್ನು ಗೌರವಿಸುವುದರಿಂದ ಜೀವನ ಸಾರ್ಥಕ: ಕಟ್ಟೆ ನರಹರಿ ಕೆರೆಕೊಪ್ಪ
ಡಿಸೆಂಬರ್ ಒಳಗಾಗಿ ಕಾಮಗಾರಿ ಮುಕ್ತಾಯಗೊಳಿಸುವುದಾಗಿ ಮಾತು ನೀಡಿದ್ದೆವು. ಅದರಂತೆ ಅಧಿಕಾರಿಗಳು ಹಾಗೂ ಟೆಂಡರ್ ದಾರರು ಕಾಮಗಾರಿಯನ್ನು ಹಗಲಿರುಳು ನಡೆಸಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದರು.
2025 ಜನವರಿ 1ರಂದೇ ಹೊಸ ವರ್ಷದ ದಿನದಂದು ಸಾರ್ವಜನಿಕರ ಉಪಯೋಗಕ್ಕಾಗಿ ಮುಕ್ತಗೊಳಿಸಲು ತೀರ್ಮಾನ ಮಾಡಲಾಗಿದೆ. ಆದಾಗ್ಯೂ ಕೊಂಚ ವ್ಯತ್ಯಾಸವಾದರೂ ಜನವರಿ ಮೊದಲ ವಾರದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ಎರಡು ವರ್ಷದಲ್ಲಿ ಈ ಕಾಮಗಾರಿಯಿಂದಾಗಿ ನಾಗರಿಕರಿಗೆ ಒಂದಷ್ಟು ತೊಂದರೆಯಾಗಿದೆ. ಆದರೂ, ಸಾರ್ವಜನಿಕರು ತಾಳ್ಮೆಯಿಂದ ಆದ ತೊಂದರೆಯನ್ನು ಸಹಿಸಿಕೊಂಡು ಸಹಕಾರ ನೀಡಿದ್ದಾರೆ. ಅದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ತಾಲೂಕು ಬಿಜೆಪಿ ಪ್ರಮುಖರಾದ ಮಂಗೋಟೆ ರುದ್ರೇಶ್, ಧರ್ಮಪ್ರಸಾದ್, ಚನ್ನೇಶ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post