ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನಾ ಸೋಂಕು ಹಾಗೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡ ವಿಪ್ರ ಕುಟುಂಬಗಳಿಗೆ ಹಳೆನಗರ ಬ್ರಾಹ್ಮಣ ಬೀದಿಯ ಗೆಳೆಯರ ಬಳಗದ ವತಿಯಿಂದ ದಿನಸಿ ಪದಾರ್ಥಗಳನ್ನು ಉಚಿತವಾಗಿ ವಿತರಿಸಲಾಯಿತು.
ಪೌರೋಹಿತ್ಯ, ಅಡುಗೆ ಕೆಲಸ ಸೇರಿದಂತೆ ಇನ್ನಿತರೆ ಸಣ್ಣ-ಪುಟ್ಟ ಕೆಲಸಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ, ಈ ಕುಟುಂಬಗಳು ಕೊರೋನ ಲಾಕ್‌ಡೌನ್ ಪರಿಣಾಮವಾಗಿ ಊಟಕ್ಕೂ ಸಹ ಪರದಾಡುವಂತಹ ಪರಿಸ್ಥಿತಿ ತಂದೊಡ್ಡಿದೆ. ಇಂತಹ ವಿಪ್ರ ಕುಟುಂಬಗಳು ಬೇರೆಯವರ ಮುಂದೆ ಕೈಚಾಚದಂತಹ ಸ್ಥಿತಿ ಬರದೆ ಇರಲಿ ಎಂಬ ಸದುದ್ದೇಶದಿಂದ ಈ ಗೆಳೆಯರ ಬಳಗ ಇಂತಹ ಸತ್ಕಾರ್ಯವನ್ನು ಮಾಡಿದೆ.
ನಗರದಲ್ಲಿ ತೀರಾ ಬಡತನದಲ್ಲಿರುವ ಬ್ರಾಹ್ಮಣ ಕುಟುಂಬಗಳಿಗೆ ಸುಮಾರು 20 ಚೀಲ ದಿನಸಿ ಪದಾರ್ಥಗಳನ್ನು ಉಚಿತವಾಗಿ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಕುಟುಂಬಗಳಿಗೆ ಮುಂದುವರೆಯಲಿದೆ.
ಆರ್.ಎಸ್. ಅನಂತಾಚಾರ್, ರಾಘವೇಂದ್ರ ದೇಶಪಾಂಡೆ, ಗುರುರಾಜ್, ರಮಾಕಾಂತ್, ಕೃಷ್ಣಾಸ್ವಾಮಿ, ರಾಘವೇಂದ್ರ ತಂತ್ರಿ, ಜಯತೀರ್ಥಾ, ನರಸಿಂಹಸ್ವಾಮಿ, ಸುಬ್ಬಣ್ಣ (ಮೈಕ್), ಮಧುರಾವ್ ಅವರುಗಳು ವೈಯಕ್ತಿಕವಾಗಿ ಇದರ ವೆಚ್ಚ ಭರಿಸಿ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಿದ್ದಾರೆ. ಅಲ್ಲದೆ ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ನಾವೆಲ್ಲರೂ ನಿಮ್ಮೊಂದಿಗಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post