ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಈ ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಒಟ್ಟು 17 ಮಂದಿ 25 ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ನಾಮಪತ್ರ ಪರಿಶೀಲನೆ ನಡೆದು 17 ಮಂದಿಯಲ್ಲಿ ಓರ್ವ ಪಕ್ಷೇತರ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿದೆ.
ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ ಮತ್ತು ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಸುರೇಶ್ ಆರ್ಚಾ ನಾಮಪತ್ರ ಪರಿಶೀಲನೆ ನಡೆಸಿದ್ದು, 16 ನಾಮಪತ್ರ ಸಿಂಧು ಆಗಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಮಾರ್ವಿನ್ ಅಕ್ಕಿದಾಸರಿ ಸಲ್ಲಿಸಿದ್ದ ನಾಮಪತ್ರ ಅಸಿಂಧುಗೊಂಡಿದೆ.
ಶಾಸಕ ಬಿ.ಕೆ. ಸಂಗಮೇಶ್ವರ್ (ಕಾಂಗ್ರೆಸ್), ಶಾರದ ಅಪ್ಪಾಜಿ (ಜೆಡಿಎಸ್), ಮಂಗೋಟೆ ರುದ್ರೇಶ್ (ಬಿಜೆಪಿ), ಆನಂದ್ (ಎಎಪಿ), ಸುಮಿತ್ರಾ ಬಾಯಿ (ಕೆಆðಎಸ್), ಶಶಿಕುಮಾರ್ ಎಸ್. ಗೌಡ (ಜೆಡಿಯು), ಇ.ಪಿ. ಬಸವರಾಜ (ಆಪಿರ್‌ಐಕೆ), ಬಿ.ಎನ್. ರಾಜು (ಪಕ್ಷೇತರ), ಅಹಮ್ಮದ್ ಅಲಿ (ಪಕ್ಷೇತರ), ನೀಲಂ (ಪಕ್ಷೇತರ), ಜಾನ್ಬೆನ್ನಿ (ಪಕ್ಷೇತರ), ಕೆ. ಮೋಹನ್ (ಪಕ್ಷೇತರ), ಎಸ್.ಕೆ. ಸುಧೀಂದ್ರ (ಪಕ್ಷೇತರ), ವೈ. ಶಶಿಕುಮಾರ್ (ಪಕ್ಷೇತರ), ಡಿ. ಮೋಹನ್ (ಪಕ್ಷೇತರ) ಮತ್ತು ರಾಜಶೇಖರ್ (ಪಕ್ಷೇತರ) ನಾಮಪತ್ರ ಸಿಂಧುಗೊಂಡಿವೆ.
Also read: ಭದ್ರಾವತಿ ವಿನಯ್ ಮರ್ಡರ್: 24 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ವಿವಿಧ ರಾಜಕೀಯ ಪಕ್ಷಗಳಿಂದ 7 ಮಂದಿ ಹಾಗೂ ಪಕ್ಷೇತರರಾಗಿ 9 ಮಂದಿ ಒಟ್ಟು 16 ಮಂದಿ ಇದ್ದು, ನಾಮಪತ್ರ ಹಿಂಪಡೆಯಲು ಏ.24 ಕೊನೆಯ ದಿನವಾಗಿದ್ದು, ನಂತರ ಅಂತಿಮ ಕಣದಲ್ಲಿ ಉಳಿದವರ ಮಾಹಿತಿ ಲಭ್ಯವಾಗಲಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















