ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾ ನದಿಗೆ ಇಳಿದಿದ್ದ ಮಗನನ್ನು ರಕ್ಷಿಸಲು ಹೋದ ತಂದೆ ನೀರುಪಾಲಾದ ಘಟನೆ ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭದ್ರಾವತಿಯ ಭೂತನಗುಡಿಯ ನಿವಾಸಿ ಹಫೀಜ್ ಜಾಬರ್ ಮತ್ತು ಅವರ ಪುತ್ರ ಜಾವೇದ್ (14) ಕುಟುಂಬ ಬಿಆರ್ ಪಿಗೆ ವಿಹಾರಕ್ಕೆ ತೆರಳಿದ್ದರು. ಊಟ ಮುಗಿಸಿ ಪುತ್ರ ಜಾವೇದ್ ಹಿನ್ನೀರಿನಲ್ಲಿ ಇಳಿದಾಗ ಆಳದ ಅಂದಾಜಿಲ್ಲದ ಕಾರಣ ನೀರು ಪಾಲಾಗಿದ್ದನು. ಇದನ್ನು ನೋಡಿದ ತಂದೆ ಮಗನನ್ನು ರಕ್ಷಿಸಲು ನೀರಿಗೆ ಇಳಿದು ಅವರೂ ನೀರುಪಾಲಾಗಿದ್ದಾರೆ. ಸಂಜೆಯ ವೇಳೆ ಮಗ ಶವವಾಗಿ ಪತ್ತೆಯಾದರೆ ತಂದೆಯ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post