ಇಲ್ಲಿನ ಬೊಮ್ಮನಕಟ್ಟೆಯಲ್ಲಿ ನಡೆದ ಮುಜಾಹಿದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೇಪರ್ ಟೌನ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುರಾಜ ಮೈಲಾರ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಕರಣದ ಆರೋಪಿಗಳಾದ ಐವರನ್ನು ಬಂಧಿಸಿದ್ದಾರೆ. ಬಂಧಿತರ ಕುರಿತಾಗಿ ಜಿಲ್ಲಾ ಪೊಲೀಸರು ಮಾಹಿತಿ ಬಿಡುಗಡೆ ಮಾಡಿದ್ದು, ಇವರಗಳನ್ನು ಹಿರಿಯೂರಿನ ಸಂತೋಷ್ ಕುಮಾರ್, ಹೊಸಮನೆಯ ಆಟೋ ಸೂರಿ, ಮಂಜುನಾಥ್, ಭೂತನಗುಡಿಯ ವಿಜಯ್ ಕುಮಾರ್, ಬಾರಂದೂರು ಹಳ್ಳಿಕೆರೆಯ ವೆಂಕಟೇಶ್ ಎಂದು ಗುರುತಿಸಲಾಗಿದೆ.
ಹತ್ಯೆಗೀಡಾದ ಮುಜಾಹೀದ್ 2019ರಲ್ಲಿ ರಮೇಶ್ ಎನ್ನುವವನನ್ನು ಕೊಲೆ ಮಾಡಿ, ಈಗ ಬಂಧಿತರಾದ ಸಂತೋಷ್ ಹಾಗೂ ಸುರೇಂದ್ರ ಅವರುಗಳ ಮೇಲೆ ಹಲ್ಲೆ ಮಾಡಿದ್ದನು. ಈ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಮುಜಾಹೀದ್’ನಲ್ಲಿ ಈಗ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್’ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಭದ್ರಾವತಿ ಡಿವೈಎಸ್’ಪಿ ಜಿತೇಂದ್ರ ಕುಮಾರ್ ಅವರುಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೇಪರ್ ಟೌನ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುರಾಜ ಮೈಲಾರ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಪೇಪರ್ ಟೌನ್ ಠಾಣೆಯ ಅಧಿಕಾರಿ ಕವಿತಾ, ಎಎಸ್’ಐ ರತ್ನಾಕರ, ಸಿಬ್ಬಂದಿಗಳಾದ ವೆಂಕಟೇಶ್, ಅರುಣ, ವಾಸುದೇವ, ನಾಗರಾಜ, ಚಿನ್ನಾನಾಯ್ಕ್, ಚನ್ನಕೇಶವ, ಹಾಲಪ್ಪ, ಮಂಜುನಾಥ್, ಹನುಮಂತ ಆವಟಿ, ಆದರ್ಶ ಶೆಟ್ಟಿ, ವಿಕ್ರಂ, ಶಿವಪ್ಪ, ಮಂಜುನಾಥ್ ಮಳ್ಳಿ, ಈರಯ್ಯ, ತಾಂತ್ರಿಕ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್ ಹಾಗೂ ವಿಜಯ ಕುಮಾರ್ ಅವರುಗಳು ಪಾಲ್ಗೊಂಡಿದ್ದರು.
Discussion about this post