ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನ ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣಕ್ಕೆ ದಿನನಿತ್ಯ ಸಂಚರಿಸಲು ತುರ್ತಾಗಿ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿದೆ.
ಕೋವಿಡ್ 19ರಿಂದಾಗಿ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಬಸ್ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಬಸ್‌ಗಳನ್ನೆ ಅವಲಂಭಿಸಿರುವ ವಿದ್ಯಾರ್ಥಿಗಳು, ಕಾಲೇಜು ಅಧ್ಯಾಪಕರು, ಸರ್ಕಾರಿ ನೌಕರರು ಹಾಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ನಲ್ಲಿ ಸಂಚರಿಸುವ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ತುರ್ತಾಗಿ ಬಸ್ ವ್ಯವಸ್ಥೆ ಮಾಡಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ಭದ್ರಾವತಿ ಬಸ್ ನಿಲ್ದಾಣದಿಂದ ಟಿಪ್ಪು ಸರ್ಕಲ್, ಅನ್ವರ್ ಕಾಲೋನಿ, ಅಮೀರ್ ಜಾನ್ ಕಾಲೋನಿ ಹೊಳೆಹೊನ್ನೂರು ಮಾರ್ಗವಾಗಿ ದಾಸರಕಲ್ಲಹಳ್ಳಿಯಿಂದ ಹೊಳೆಹೊನ್ನೂರು. ಹಾಗೂ ಭದ್ರಾವತಿ ಬಸ್ ನಿಲ್ದಾಣದಿಂದ ಅರಬಿಳಜಿವರೆಗೆ. ಭದ್ರಾವತಿ ಹೊಸಮನೆ, ಕಾಚಗೊಂಡನಹಳ್ಳಿ, ದೇವರಹಳ್ಳಿ, ಗುಡ್ಡದ ನೇರಳಕೆರೆಗೆ ಹೋಗಿ ವಾಪಾಸ್ ಬಸ್ ನಿಲ್ದಾಣಕ್ಕೆ. ಭದ್ರಾವತಿ ತಾಲೂಕಿನ ಹೊಳೆಹೊನ್ನೂರು, ಕೈಮರ, ಕಲ್ಲಿಹಾಳ್, ಮಾರಶೆಟ್ಟಿ ಹಳ್ಳಿ, ಅರಬಿಳಜಿ, ಅರಬಿಳಜಿ ಕ್ಯಾಂಪ್, ಕೂಡ್ಲಿಗೆರೆ, ಅರಳಿಹಳ್ಳಿ, ಶ್ರೀರಾಮನಗರ, ಸೀಗೆಬಾಗಿ ಬಂದು ಭದ್ರಾವತಿ ಮಾರ್ಗವಾಗಿ ಆಲ್ ಮಹಮೊದ್ ಶಾಲೆ, ವಿಶ್ವೇಶ್ವರ ಕಾನ್ವೆಂಟ್ ಹಾಗೂ ಬಸ್ ನಿಲ್ದಾಣಕ್ಕೆ ಹೋಗಿ ಸೇರುವಂತೆ ಬಸ್ ಮಾರ್ಗ ಮಾಡಿಕೊಡಬೇಕು ಎಂದು ಹೇಳಲಾಗಿದೆ.
ಭದ್ರಾವತಿ ಬಸ್ ನಿಲ್ದಾಣದಿಂದ ನ್ಯೂಟೌನ್ ಜಯಶ್ರೀ ಸರ್ಕಲ್, ಮಿಲಿಟರಿ ಕ್ಯಾಂಪ್, ಬೊಮ್ಮನಕಟ್ಟೆ, ಹಿರಿಯೂರು, ಗೊಂದಿ, ಹುಣಸೇಕಟ್ಟೆ ಜಂಕ್ಷನ್‌ವರೆಗೆ ಹೋಗಿ ವಾಪಸ್ ಬಸ್ ನಿಲ್ದಾಣಕ್ಕೆ ಬರುವಂತೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿ ಕೋರಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಮಹಮದ್ ತಾಹೇರ್, ಕಾರ್ಯದರ್ಶಿ ಮಹಮದ್ ಗೌಸ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post