ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏರ್ಪಡಿಸಲಾಗಿದ್ದ ಆಶ್ಲೇಷ ಬಲಿ ಹಾಗೂ ಪೂಜೆ ಅದ್ದೂರಿಯಾಗಿ ಸಂಪನ್ನಗೊಂಡಿತು.
ಪ್ರಧಾನ ಅರ್ಚಕರಾದ ಪ್ರಮೋದ್ ಕುಮಾರ್ ಅವರು ಅಮೃತ್ ಅವರಿಂದ ಆಶ್ಲೇಷ ಬಲಿ ಪೂಜೆಯನ್ನು ನೆರವೇರಿಸಿದರು.
ಮುಂಜಾನೆ ವಿಶೇಷ ಪೂಜೆ, ಅಲಂಕಾರದ ನಂತರ ಆಶ್ಲೇಷ ಬಲಿ ಪೂಜೆಗಾಗಿ ರಚಿಸಲಾಗಿದ್ದ ಮಂಡಲದಲ್ಲಿ ಶಾಸ್ತ್ರೋಕ್ತವಾಗಿ ನಡೆಸಲಾಯಿತು.
ಗುರುರಾಜ ಸೇವಾ ಸಮಿತಿಯ ಅಧ್ಯಕ್ಷರಾದ ಮುರಳೀಧರ, ನಿರಂಜನ್ ಆಚಾರ್, ಪ್ರಧಾನ ಕಾರ್ಯದರ್ಶಿಯಾದ ಜೀ ರಮಾಕಾಂತ್, ಉಪಾಧ್ಯಕ್ಷರಾದ ಸುಮಾ ರಾಘವೇಂದ್ರ ತಂತ್ರಿ ಹಾಗೂ ಯುವ ಮುಖಂಡರಾದ ಬಿ.ಎಸ್. ಗಣೇಶ್ ಉಪಸ್ಥಿತರಿದ್ದರು. ಪೂಜೆಗೆ ಸುಜಾತ ರಮಾಕಾಂತ್ ಅಭಿನಂದನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post