ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಿರಿಯ ಚಲನಚಿತ್ರ ನಟ, ಮಾಜಿ ಉದ್ಯೋಗಿ ಎಸ್. ದೊಡ್ಡಣ್ಣನವರ Actor Doddanna ನೇತೃತ್ವದಲ್ಲಿ ನ.4 ಮತ್ತು 5ರಂದು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ VISL ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನಲೆಯಲ್ಲಿ ವಿಐಎಸ್‌ಎಲ್ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಭೂಮಿ ಪೂಜೆ ಮೂಲಕ ಬೃಹತ್ ವೇದಿಕೆ ನಿರ್ಮಾಣಕ್ಕೆ ಭಾನುವಾರ ಚಾಲನೆ ನೀಡಲಾಯಿತು.
ಶತಮಾನೋತ್ಸವ ಸಮಿತಿ ಕಾರ್ಯದರ್ಶಿ ಅಮೃತ್ ಸೇರಿದಂತೆ ಇನ್ನಿತರರು ಮಾತನಾಡಿ, ಕಾರ್ಖಾನೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರದ ಗಮನ ಸೆಳೆಯಲು ಶತಮಾನೋತ್ಸವ ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕೆಂದರು.
ಬೃಹತ್ ವೇದಿಕೆ ನಿರ್ಮಾಣದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಹೊಸಮನೆ ಭವಾನಿ ಶಾಮಿಯಾನ ವತಿಯಿಂದ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಶತಮಾನೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ಜನರು ಪಾಲ್ಗೊಳ್ಳುವ ವಿಶ್ವಾಸ ಸಮಿತಿ ಹೊಂದಿದೆ.
Also read: ರೈಲು ಅಪಘಾತ| ಮೃತರ ಕುಟುಂಬಸ್ಥರಿಗೆ 10ಲಕ್ಷ ರೂ. ಪರಿಹಾರ: ಮುಖ್ಯಮಂತ್ರಿ ವೈ.ಎಸ್. ಜಗನ್
ಶಾಮಿಯಾನ ಮಾಲೀಕ ಭವಾನಿ, ನಿವೃತ್ತ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ನಗರಸಭೆ ಮಾಜಿ ಉಪಾಧ್ಯಕ್ಷ ವೆಂಕಟೇಶ್, ಸಮಾಜ ಸೇವಕರಾದ ಸಿದ್ದಲಿಂಗಯ್ಯ, ಕೃಷ್ಣೇಗೌಡ, ಶಂಕರ್, ಕೆಂಪಯ್ಯ, ಹನುಮಂತರಾವ್, ಬಸವರಾಜ್, ಡಾಕಪ್ಪ, ನಾಗರಾಜ್, ತ್ರಿವೇಣಿ, ಶೈಲೇಶ್ರೀ, ಮಹೇಶ್ವರಪ್ಪ, ವೆಂಕಟೇಶ್ ಪ್ರಸಾದ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ನರಸಿಂಹಚಾರ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post