ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿಯೊಬ್ಬ ಲಕ್ಷಾಂತರ ರೂ. ಹಣ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದರೂಢ ನಗರದ ಭಾರತ್ ಪೈನಾನ್ಸಿಯಲ್ ಇನ್ ಕ್ಲೋಷನ್ ಲಿಮಿಟೆಡ್ ಸಿಬ್ಬಂದಿ ದಿನೇಶ್ ಸುಮಾರು 3,70,144 ರೂ. ಕಬಳಿಸಿದ್ದು, ಸುಮಾರು 1 ವರ್ಷದಿಂದ ದಿನೇಶ್ ಸಂಸ್ಥೆಯಿಂದ ಸಾಲ ನೀಡಿದಂತಹ ಒಟ್ಟು 25 ಮಹಿಳಾ ಸಂಘಗಳ ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದನು. ಹಣವನ್ನು ಸಂಗ್ರಹಿಸಿ ಸಂಸ್ಥೆಯ ಖಾತೆಗೆ ಜಮಾ ಮಾಡುತ್ತಿದ್ದನು.
ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಒಟ್ಟು 3,70,144 ರೂ. ವ್ಯತ್ಯಾಸ ಕಂಡುಬಂದಿದ್ದು, ಹಣದ ಬಗ್ಗೆ ಈತನನ್ನು ವಿಚಾರ ಮಾಡಿದಾಗ ಹಣ ಸ್ವಂತಕ್ಕೆ ಬಳಸಿಕೊಂಡಿರುತ್ತೆನೆಂದು ಹಾಗೂ 20 ದಿನಗಳಲ್ಲಿ ಹಣ ಜಮಾ ಮಾಡುವುದಾಗಿ ತಿಳಿಸಿದ್ದು, ಆದರೆ ಒಟ್ಟು 2,23,875 ರೂ. ಹಣ ಬಾಕಿ ಉಳಿಸಿಕೊಂಡಿದ್ದು,
ಈ ಹಿನ್ನೆಲೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ಬಸವರಾಜ್ ಎಂಬುವರು ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post