ಕಲ್ಪ ಮೀಡಿಯಾ ಹೌಸ್ | ಭದ್ರಾವತಿ/ದಕ್ಷಿಣ ಕನ್ನಡ |
ಕೊಲ್ಲೂರು ಘಾಟಿಗೆ ಹೊಂದಿಕೊಂಡಿರುವ ಅರಶಿನ ಗುಂಡಿ ಫಾಲ್ಸ್‌ನಲ್ಲಿ Arishin Gundi Fals ಕಾಲು ಜಾರಿ ಬಿದ್ದ ಭದ್ರಾವತಿ ಯುವಕ ಶರತ್ ಇನ್ನೂ ಕೂಡ ಪತ್ತೆಯಾಗಿಲ್ಲ. ಶರತ್ರವರ ಪತ್ತೆಗಾಗಿ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಮತ್ತು ಡೈವಿಂಗ್ ಎಕ್ಸ್ಪರ್ಟ್ ಈಶ್ವರ್ ಮಲ್ಪೆ ತಂಡ ಶರತ್ರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕಲ್ಲುಬಂಡೆಗಳ ಕೊರಕಲಿನ ನಡುವೆ ರಭಸವಾಗಿ ನೀರು ಹರಿಯುತ್ತಿದ್ದು, ಅದರ ನಡುವೆ ಶರತ್ರ ಹುಡುಕಾಟ ಕಷ್ಟಸಾಧ್ಯವಾಗುತ್ತಿದೆ. ಹಗ್ಗ ಕಟ್ಟಿಕೊಂಡು ಬಂಡೆಗಳ ನಡುವೆ ಸಾಹಸಿಗರು ಶರತ್ಗಾಗಿ ಹುಡುಕಾಡಿದ್ದಾರೆ. ಪ್ರಯತ್ನ ಕೈಗೂಡುತ್ತಿಲ್ಲ ಇನ್ನೂ ಈಶ್ವರ್ ಮಲ್ಪೆಯವರು ಕೂಡ ಆಯಕಟ್ಟಿನ ಜಾಗದಿಂದ ಮೇಲಕ್ಕೆ ಹುಡುಕುತ್ತಾ ಬರುವಾಗಿ ಕಾಲು ಜಾರಿ ಅವರು ಸಹ ನೀರಿಗೆ ಬಿದ್ದಿದ್ದಾರೆ ಹಾಗಾಗಿ ಅಲ್ಲಿದ್ದವರು ಅವರನ್ನ ಕಾರ್ಯಾಚರಣೆ ಮುಂದುವರಿಸದಂತೆ ತಡೆದಿದ್ದಾರೆ. ಅದೃಷ್ಟವಶಾತ್ ಅನಾಹುತವೊಂದು ತಪ್ಪಿದೆ.

Also read: ಕರಾವಳಿಯಲ್ಲಿ ಇಂದು ರೆಡ್ ಅಲರ್ಟ್: ಶಿವಮೊಗ್ಗದಲ್ಲಿ ಇನ್ನೂ ಎಷ್ಟು ದಿನ ಮಳೆ ಎಚ್ಚರಿಕೆ?











Discussion about this post