ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಶಿವಮೊಗ್ಗ ಸಾಗರ ರಸ್ತೆ ಸೆಂಟ್ ಜೋಸೆಫ್ ಚರ್ಚ್ ಹಾಗೂ ಭದ್ರಾವತಿಯ ತಾಯಿ ಮಡಿಲು ಸಂಸ್ಥೆ ವತಿಯಿಂದ ಕೊರೋನಾ ಸಂಕಷ್ಟದ ಕಾಲದಲ್ಲಿ ನೊಂದಂತಹ ಅನೇಕರನ್ನು ಗುರುತಿಸಿ ದಾನಿಗಳ ನೆರವಿನಿಂದ ಇಲ್ಲಿವರೆಗೆ ಸುಮಾರು 22 ಜನ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಣೆ ಮಾಡಲಾಯಿತು.
ಚರ್ಚ್‌ನ ಮುಖ್ಯ ಗುರು ಫಾದರ್ ಅಬ್ರಹಾಂ, ಸುಪೀರಿಯರ್ ಸಿಸ್ಟರ್ಸ್, ಅಲೆಮಾರಿ ಸಮುದಾಯದ ರಾಜ್ಯಾಧ್ಯಕ್ಷ ರಾಜು, ತಾಯಿ ಮಡಿಲು ಸೇವಾ ಸಂಸ್ಥೆಗೆ ನೆರವಾದ ಜಯಪ್ರಕಾಶ್ ಹಾಗೂ ನೆರವಾಗಿರುವ ಎಲ್ಲಾ ದಾನಿಗಳಿಗೆ ತಾಯಿ ಮಡಿಲು ಸೇವಾ ಕಾರ್ಯಕರ್ತರಾದ ಆಶಾ, ರಾಜು ಧನ್ಯವಾದ ತಿಳಿಸಿದ್ದಾರೆ.
ಸಂಕಷ್ಟದಲ್ಲಿ ಇರುವ ಕೆಲವು ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಆಹಾರ ಕಿಟ್ ವಿತರಿಸಲು ಯೋಜನೆ ರೂಪಿಸಿ ಕೊಂಡಿದ್ದೇವೆ. ನಿಮ್ಮೆಲ್ಲರ ಸಹಕಾರ ಪ್ರೀತಿ ಅಭಿಮಾನ ಇರಲಿ ಎಂದು ಅನಿತಾ ಮೇರಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post