ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೊರೋನಾ ವೈರಸ್ ಹಾಗೂ ಲಾಕ್’ಡೌನ್’ನಿಂದ ಕಂಗೆಟ್ಟ ನಾಡಿಗೆ ದೀಪಾವಳಿ ಹಬ್ಬ ಹೊಸ ಬೆಳಕನ್ನು ತರಲಿ, ಎಲ್ಲರ ಬದುಕಲ್ಲಿ ನವ ಜೀವನೋತ್ಸಾಹ ಮೂಡಿಸಲಿ ಎಂದು ಮಾಜಿ ಶಾಸಕ ದಿವಂಗತ ಎಂ.ಜೆ. ಅಪ್ಪಾಜಿ ಗೌಡರ ಕುಟುಂಬಸ್ಥರು ಹಾರೈಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅಪ್ಪಾಜಿ ಗೌಡರ ಪತ್ನಿ ಶಾರದಾ ಹಾಗೂ ಪುತ್ರ ಅಜಿತ್, ಕೊರೋನಾ ವೈರಸ್ ಜನರ ಜೀವವನ್ನೇ ಹಿಂಡಿದೆ. ಇದಕ್ಕೆ ಭದ್ರಾವತಿಯೂ ಸಹ ಹೊರತಾಗಿಲ್ಲ. ಇದರೊಂದಿಗೆ ಅನಿವಾರ್ಯವಾಗಿದ್ದ ಲಾಕ್’ಡೌನ್’ನಿಂದಾಗಿ ಜನರು ತಮ್ಮ ಬದುಕನ್ನು ಬಹುತೇಕ ಹೊಸದಾಗಿ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇಂತಹ ಸಂದರ್ಭದಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಿನಲ್ಲಿ ಹೊಸ ಜ್ಯೋತಿ ಬೆಳಗಿಸಿ, ಸುಂದರ ಬದುಕಿಗೆ ನಾಂದಿಯಾಗಲಿ ಎಂದರು.
ನಮ್ಮ ತಂದೆಯವರು ಪಾಲಿಸಿಕೊಂಡು ಬಂದಿದ್ದ ಜನಸೇವೆಯ ಕರ್ತವ್ಯವನ್ನು ನಾವು ಮುಂದುವರೆಸಿಕೊಂಡು ಬಂದಿದ್ದು, ಭದ್ರಾವತಿಯ ಜನರ ಸೇವೆಗಾಗಿ ಸದಾ ಅರ್ಪಿಸಿಕೊಂಡಿದ್ದೇವೆ. ನಮ್ಮೂರಿನ ಜನರ ಸುಖ-ದುಃಖದೊಂದಿಗೆ ಸರ್ವಥಾ ನಾವಿದ್ದೇವೆ. ಯಾವುದೇ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ನಮ್ಮ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಅಜಿತ್ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post