ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೇನಗರ ಚಾಮೇಗೌಡರ ಏರಿಯಾದ ರೈಲ್ವೆ ನಿಲ್ದಾಣದ ಮುಂದೆ ನಟ ದಿ.ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪ್ರತಿಮೆಯನ್ನ ನಟನ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ #Ashwini Puneeth Rajkumar ಅನಾವರಣಗೊಳಿಸಿದರು.
ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ದೊಡ್ಡ ಟೆಂಟ್ ನಿರ್ಮಿಸಿ ಸಮಾರಂಭ ನಡೆಸಲಾಗಿದೆ. ಡಾ. ರಾಜ್ ಕುಮಾರ್ #Rajkumar ಮತ್ತು ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಮಾರ್ ಅವರ ಕಂಚಿನ ಪುತ್ಥಳಿಯನ್ನ ಜೊತೆಯಲ್ಲೇ ನಿರ್ಮಿಸಿ ಡಾ.ರಾಜ್ ಕುಮಾರ್ ಮತ್ತು ಡಾ. ಪುನೀತ್ ರಾಜ್ ಕುಮಾರ್ ದೇಗುಲ ಎಂದು ನಾಮಕರಣ ಮಾಡಲಾಗಿದೆ. ದೇಗುಲ ಮತ್ತು ತಲಾ 5 ಲಕ್ಷ ರೂ.ದಲ್ಲಿ ಇಬ್ಬರ ಕಂಚಿನ ಪ್ರತಿಮೆಗೆ ವೆಚ್ಚ ತಗುಲಿದರೆ, ದೇಗುಲ ನಿರ್ಮಾಣಕ್ಕೆ 35 ಲಕ್ಷ ರೂ.ನಲ್ಲಿ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್, ರಾಜ್ಯದ ಜನರ ಮನಸ್ಸಿನಲ್ಲಿ ಪುನೀತ್ ರಾಜಕುಮಾರ್ ದೇವರಾಗಿದ್ದಾರೆ. ಇಲ್ಲಿ ನಿರ್ಮಿಸಲಾಗಿರುವ ಇಬ್ಬರ ದೇಗುಲದಲ್ಲಿ ದಿನನಿತ್ಯ ದೇವರಿಗೆ ನಡೆಯುವ ಪೂಜಾ ಕಾರ್ಯ ನಡೆಯುತ್ತದೆ ಎಂದರು.
ನಗರಸಭೆ ಸದಸ್ಯ ಬಿ.ಕೆ. ಮೋಹನ್ ಮಾತನಾಡಿ, ನಗರದಲ್ಲಿ ಡಾ.ರಾಜಕುಮಾರ್ ರಸ್ತೆಯಿದೆ. ಇದರೊಟ್ಟಿಗೆ ಕೋರ್ಟ್ ರಸ್ತೆಗೆ ಪುನೀತ್ ರಾಜಕುಮಾರ್ ಹೆಸರು ಇಡಬೇಕಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















