ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
‘ಆಜಾದಿ ಕಾ ಅಮೃತ್ ಮಹೋತ್ಸವ’ದ ಅಂಗವಾಗಿ ಎಸ್‌ಎಐಎಲ್-ವಿಐಎಸ್‌ಎಲ್, ರೋಟರಿ ಕ್ಲಬ್ ಭದ್ರಾವತಿ, ಸರ್ಕಾರಿ ಆಸ್ಪತ್ರೆ, ಭದ್ರಾವತಿ ಮತ್ತು ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಶಿವಮೊಗ್ಗ ಸಹಯೋಗದಲ್ಲಿ ಭದ್ರಾವತಿಯ ರೋಟರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರವನ್ನು ಎಸ್‌ಎಐಎಲ್-ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕರಾದ ಬಿ.ಎಲ್. ಚಂದ್ವಾನಿ ಅವರು ಉದ್ಘಾಟಿಸಿದರು.
ಎಸ್‌ಎಐಎಲ್-ವಿಐಎಸ್‌ಎಲ್ ಆಸ್ಪತ್ರೆ ಮೂಳೆ ತಜ್ಞವೈದ್ಯ ಡಾ. ಎಮ್.ವೈ. ಸುರೇಶ್ ಮತ್ತು ದಂತ ವೈದ್ಯ ಡಾ. ಎಸ್.ಎನ್.ಸುರೇಶ್, ಬಿಪಿ, ಶುಗರ್ ತಪಾಸಣೆ, ಕೋವಿಡ್ ಲಸಿಕೆ ಬೂಸ್ಟರ್ ಡೋಸ್, ಮೂಳೆ, ದಂತ ತಪಾಸಣೆ ಮಾಡಿದರು. ಹಾಗೂ ಸಹ್ಯಾದ್ರಿ ನಾರಾಯಣ ಹೃದಯಾಲದ ಹೃದ್ರೋಗ ತಜ್ಞ ಡಾ. ಶರತ್ ಮತ್ತು ಡಾ. ಹಂಸಲೇಖ ಹೃದಯ ಸಮಸ್ಯೆಗಳ ತಪಾಸಣೆ ಮಾಡಿದರು. ಒಟ್ಟು 94 ಮಂದಿ ಶಿಬಿರದ ಪ್ರಯೋಜನ ಪಡೆದರು.
ಅಧ್ಯಕ್ಷರು ಎಸ್. ಅಡವೀಶಯ್ಯ,ರೋಟರಿ ಕ್ಲಬ್ ಕಾರ್ಯದರ್ಶಿ ಸುರೇಶ್ ಕುಮಾರ್, ಮುಖ್ಯ ವೈದ್ಯಾಧಿಕಾರಿ ಡಾ. ಎಮ್.ವೈ. ಸುರೇಶ್, ಮಹಾಪ್ರಬಂಧಕರು (ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಮತ್ತು ಸಹಾಯಕ ಪ್ರಬಂಧಕರು (ಸಿಬ್ಬಂದಿ) ಕೆ.ಎಸ್. ಶೋಭ ಉಪಸ್ಥಿತರಿದ್ದರು.
Also read: ಸಾಹಿತ್ಯವೆಂಬುದು ಜಾತಿ ಧರ್ಮಗಳನ್ನು ಮೀರಿದ್ದು: ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post