ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೀತಾ ಶಿವರಾಜಕುಮಾರ್ Geeth Shiva Rajkumar ಅವರು 3 ಲಕ್ಷ ಮತಗಳ ಅಂತರದಲ್ಲಿ ಗೆಲುವುದು ಸಾಧಿಸುವುದು ನಿಶ್ಚಿತ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಭರವಸೆ ವ್ಯಕ್ತಪಡಿಸಿದರು.
ಗೀತಾ ಶಿವರಾಜಕುಮಾರ್ ಹಾಗೂ ಶಿವರಾಜಕುಮಾರ್ ಅವರನ್ನು ಕಾರೇಹಳ್ಳಿ ಬಳಿಯಲ್ಲಿ ಸ್ವಾಗತಿಸಿದ ವೇಳೆ ಮಾತನಾಡಿದ ಅವರು, ಗೀತಾ ಶಿವರಾಜಕುಮಾರ್ ಅವರು 2-3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ರಾಜ್ಯಕ್ಕೆ ನೀಡುತ್ತಿರುವ ಉತ್ತಮ ಆಡಳಿತ, ಯೋಜನೆಗಳು ಚುನಾವಣೆಯಲ್ಲಿ ವರದಾನವಾಗಲಿವೆ. ಉತ್ತಮವಾದ ಗ್ಯಾರೆಂಟಿ ಯೋಜನೆಗಳು ಮನೆ ಮನೆಗೆ ತಲುಪಿವೆ. ಮಾಸಿಕ ಧನ ನೀಡುತ್ತಿರುವ ಸರ್ಕಾರ 5 ವರ್ಷಕ್ಕೆ 2.5 ಲಕ್ಷ ರೂ. ನೀಡಿದಂತಾಗುತ್ತಿದೆ. ಇಂತಹ ಯೋಜನೆಯನ್ನು ಪ್ರಪಂಚದ ಎಲ್ಲೂ ಸಹ ನೀಡಿಲ್ಲ ಎಂದರು.
Also read: ಬೀರೂರು ಪ್ರೀತಿ ಕ್ಯಾಂಟೀನ್’ನಲ್ಲಿ ತಿಂಡಿ ಸವಿದ ಹ್ಯಾಟ್ರಿಕ್ ಹೀರೋ ಶಿವಣ್ಣ
ತಾಲೂಕಿನ ವಿಐಎಸ್’ಎಲ್, ಎಂಪಿಎಂ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಬೇಕಿದೆ. ಹೀಗಾಗಿ, ಗೀತಾ ಶಿವರಾಜಕುಮಾರ್ ಅವರು ಗೆಲ್ಲಲೇಬೇಕಿದ್ದು, ಕ್ಷೇತ್ರದ ಮತದಾರರು ನಮ್ಮ ಪಕ್ಷಕ್ಕೆ ಮತ ನೀಡಬೇಕು ಎಂದು ಕೋರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post