ಭದ್ರಾವತಿ: ನಗರದ ಮಿಲ್ಟ್ರಿ ಕ್ಯಾಂಪ್ ಸಮೀಪದ ಶ್ರೀಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಅದ್ದೂರಿಗೆ ಶ್ರೀಶ್ರೀನಿವಾಸ ಸ್ವಾಮಿ ರಥೋತ್ಸವ ಹಾಗೂ ವಿಶೇಷ ಹೋಮ ನೆರವೇರಿತು.
ಅ.10 ರಿಂದ ಅ.19 ರವರೆಗೆ 10 ದಿನಗಳ ಕಾಲ ಶ್ರೀಸ್ವಾಮಿಗೆ ವಿಶೇಷ ಅಲಂಕಾರ, ಪ್ರತಿನಿತ್ಯ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಕಳಸ ಸ್ಥಾಪನೆ, ನವಗ್ರಹ ಹೋಮ, ಅಂಕುರಾರ್ಪಣ ಉತ್ಸವಾಂಗ, ಸ್ವಸ್ತಿವಾಚನ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನೆರವೇರಿದವು.
ಡಿವೈಎಸ್‌ಪಿ ಓಂಕಾರನಾಯ್ಕ, ನಗರ ವೃತ್ತ ಇನ್‌ಸ್ಪೆಕ್ಟರ್ ಚಂದ್ರಶೇಖರ್, ಡಿಎಆರ್ ವೃತ್ತ ನಿರೀಕ್ಷಕ ಪ್ರಕಾಶ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು, ನೂರಾರು ಭಕ್ತಾದಿಗಳು ಹಾಗೂ ಸಾರ್ವಜನಿಕರು ರಥೋತ್ಸವದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post