ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಳೆದ ಒಂದು ತಿಂಗಳಿನಿಂದ ಬಿಸಿಲಿನ ಝಳಕ್ಕೆ ಬೆಂಡಾಗಿದ್ದ ನಗರಕ್ಕೆ ಇಂದು ವರುಣ ತಂಪೆರೆದಿದ್ದು, ಸಂಜೆ ವೇಳೆಗೆ ನಗರದಲ್ಲಿ ಭಾರೀ ಮಳೆಯಾಗಿದೆ.
ಸಂಜೆ 4 ಗಂಟೆಯಿಂದಲೇ ನಗರದಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, 5:30ರ ಸುಮಾರಿಗೆ ಭಾರೀ ಗಾಳಿ ಹಾಗೂ ಗುಡುಗಿನಿಂದ ಕೂಡಿದ ಮಳೆ ಸುರಿಯುತ್ತಿದೆ.
ನಗರದಲ್ಲಿ ಬೀಸಿದ ಭಾರೀ ಗಾಳಿ ರಭಸಕ್ಕೆ ಜನ ಅಕ್ಷರಶಃ ಬೆಚ್ಚಿ ಬಿದ್ದು, ಮಳೆಯ ಅಬ್ಬರವೂ ಕೂಡ ಜೋರಾಗಿದ್ದ ಪರಿಣಾಮ ಕಾದ ಕಾವಲಿಯಂತಾಗಿದ್ದ ಭೂಮಿ ಕೊಂಚ ತಣ್ಣಗಾಗಿದೆ.
ಶಿವಮೊಗ್ಗದಲ್ಲಿ ಕಡೆಗೂ ಮಳೆ ಬಂದೇ ಬಿಡ್ತು
ಬಿಸಿಲ ಧಗೆಗೆ ಬೇಯುತ್ತಿದ್ದ ಶಿವಮೊಗ್ಗದಲ್ಲಿ ಇಂದು ಸಂಜೆ ಸ್ವಲ್ಪ ಮಳೆಯಾಗುತ್ತಿದ್ದು ಇಳೆಗೆ ತಂಪೆರೆದಂತಾಗಿದೆ.
ಇಷ್ಟೊತ್ತಿಗಾಗಲೇ ನಾಲ್ಕೈದು ಬಾರಿ ಮಳೆಯಾಗಬೇಕಿತ್ತು. ಆದರೆ, ಒಂದೂ ಮಳೆಯಾಗದೇ ಇದ್ದುದ್ದರಿಂದ ಕೃಷಿ ಚಟುವಟಿಕೆಗಳಿಗೆ ಚಾಲನೆಯೂ ಸಿಕ್ಕಿರಲಿಲ್ಲ. ಜೊತೆಗೆ ಜಿಲ್ಲೆಯಾದ್ಯಂತ ತಾಪಮಾನ ಏರಿಕೆಯಾಗಿತ್ತು.ಶಿವಮೊಗ್ಗ ನಗರದಲ್ಲಿ 42 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲೆಯಾಗಿತ್ತು. ವಿಪರೀತ ಸೆಕೆಯಿಂದಾಗಿ ಜನ ಗೊಣಗುತ್ತಲೇ ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದರು.
2023ರ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು ಅಭ್ಯರ್ಥಿಗಳ ಪರ ಕ್ಯಾಂಪೇನ್ ಗೆ ಬಂದಿದ್ದ ಸಾವಿರಾರು ಮಂದಿ ಬಿಸಿಲ ಧಗೆಗೆ ಹೈರಾಣಾಗಿದ್ದರು.
ಇಂದು ಸಂಜೆ ಸುಮಾರು ಇಪ್ಪತ್ತು ನಿಮಿಷದಷ್ಟು ಕಾಲ ಸುರಿದ ಮಳೆಯಿಂದಾಗಿ ತುಸು ತಂಪಾದ ವಾತಾವರಣ ಉಂಟಾಗಿದೆ.
Also read: ಅನಧಿಕೃತವಾಗಿ ಸಾಗಿಸುತ್ತಿದ್ದ 20ಲಕ್ಷ ರೂ. ಮೌಲ್ಯದ ಮದ್ಯ ವಶ: ಡಿಸಿ ಪವನ್‍ಕುಮಾರ್ ಮಾಲಪಾಟಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post