ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಲಾವಿದೆಗೆ ಭಾಷೆಯ ಪರಿವಿಲ್ಲ, ಭದ್ರಾವತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ರಾಬರ್ಟ್ ಚಿತ್ರದ ನಾಯಕಿ ಆಶಾಭಟ್ ಹೇಳಿದರು.
ನಗರದ ಸತ್ಯ ಚಿತ್ರಮಂದಿರಕ್ಕೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ರಾಬರ್ಟ್ ಚಿತ್ರ ವೀಕ್ಷಿಸುವ ಮೂಲಕ ಪತ್ರಕರ್ತರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ನಾನು ಹುಟ್ಟಿಬೆಳೆದ ಊರು ಭದ್ರಾವತಿ. ನಾನು ವಿಶ್ವ ಸುಂದರಿ ಸ್ಪರ್ಧೆಯಲ್ಲೂ ಸಹ ಭದ್ರಾವತಿ ಹೆಸರನ್ನು ಹೇಳಿಕೊಂಡಿದ್ದೇನೆ. ಭದ್ರಾವತಿ ಎಂದರೆ ಹೆಮ್ಮೆ ಈಗಲೂ ಸಹ ಎಲ್ಲೆಡೆ ನನ್ನೂರು ಭದ್ರಾವತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂದರು.
ಕಲಾವಿದೆಗೆ ಭಾಷೆಯ ಪರಿವಿಲ್ಲ. ನನಗೆ ಕನ್ನಡ ಹಾಗು ಕನ್ನಡಿಗರ ಬಗ್ಗೆ ಅಭಿಮಾನವಿದೆ. ರಾಬರ್ಟ್ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರ ವೀಕ್ಷಿಸಿದವರಿಗೆ ಇದರ ಅರಿವಾಗುತ್ತದೆ. ಒಂದು ಚಿತ್ರ ನಿರ್ಮಾಣದ ಹಿಂದೆ ನೂರಾರು ಜನರ ಪರಿಶ್ರಮವಿದೆ. ಎಲ್ಲರೂ ಒಗ್ಗಟ್ಟಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ನನಗೆ ಈ ಚಿತ್ರದ ಮೂಲಕ ಉತ್ತಮ ಭವಿಷ್ಯವಿದೆ ಎಂದರು.

ಸತ್ಯ ಚಿತ್ರಮಂದಿರದಲ್ಲಿ ೬ಗಂಟೆಗೆ ಆರಂಭಗೊಂಡ ರಾಬರ್ಟ್ ಚಿತ್ರ ಪ್ರದರ್ಶನವನ್ನು ತಂದೆ ಸುಬ್ರಮಣ್ಯ ಭಟ್, ತಾಯಿ ಶ್ಯಾಮಲ ಭಟ್ ಹಾಗು ಕುಟುಂಬ ಸದಸ್ಯರ ಜೊತೆ ವೀಕ್ಷಿಸಿ ಸಂಭ್ರಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post