ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲ್ಲೂಕಿನ ಅಶ್ವಥ್ ನಗರ ಗೋಂದಿ ಚಾನಲ್ ಏರಿಯಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿ, ಒಣ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.
ಹೊಸಮನೆ ಠಾಣೆ ಪೊಲೀಸರು ದಾಳಿ ನಡೆಸಿ ಡ್ಯಾನಿ ಅಲಿಯಾಸ್ ಸ್ನೇಕ್ ಡ್ಯಾನಿ(26) ಯಾಸೀನ್ (19)ಹಾಗೂ ಸೈಯ್ಯದ್ ಟಿಪ್ಪು ಸುಲ್ತಾನ್ (18)ರನ್ನು ಬಂಧಿಸಿದ್ದು, ಆರೋಪಿಗಳಿಂದ ಅಂದಾಜು 11,800ರೂ ಮೌಲ್ಯದ 540 ಗ್ರಾಂ ಓಣ ಗಾಂಜಾ ಮತ್ತು 340 ನಗದು ಹಣ ವಶಕ್ಕೆ ಪಡೆಯಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















