ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೋವಿಡ್ ಸೋಂಕಿನಿಂದಾಗಿ ಜನ ಒಂದೆಡೆ ಬಲಿಯಾಗುತ್ತಿದ್ದರೆ, ಇನ್ನೊಂದೆಡೆ ಮೃತರ ಅಂತ್ಯಕ್ರಿಯೆ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಭದ್ರಾವತಿಯ ಒಂದಷ್ಟು ಜನ ಸಹೃದಯರು ಈ ಪುಣ್ಯದ ಕಾರ್ಯಕ್ಕೆ ಸದ್ದಿಲ್ಲದೆ ನೆರವಾಗುತ್ತಿದ್ದಾರೆ.
ಭದ್ರಾವತಿ ಹೊಸಮನೆಯ ಮಹಿಳೆಯೊಬ್ಬರು ಈಗ್ಗೆ ಮೂರು ದಿನದ ಹಿಂದೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, ಆಕೆ ಅಂತ್ಯಸಂಸ್ಕಾರಕ್ಕೆ ಹೆಚ್ಚಿನ ಜನರು ಮುಂದೆ ಬರಲಿಲ್ಲ. 8ನೆಯ ತರಗತಿ ಓದುತ್ತಿರುವ ಆಕೆಯ ಮಗ ಇನ್ನೂ ಚಿಕ್ಕವನಾದ ಕಾರಣ ಮುಂದಿನ ಕ್ರಮಗಳ ಬಗ್ಗೆ ಮಾಹಿತಿ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಮುಂದೆ ಬಂದ ಕೆಲವು ಸಹೃದಯರು ತಾವೇ ವೈಯಕ್ತಿಕವಾಗಿ ಅವರ ಅಂತ್ಯಕ್ರಿಯೆಯನ್ನು ಹಿಂದೂ ರುದ್ರಭೂಮಿಯಲ್ಲಿ ಭಾಗಶಃ ವಿಧಿವತ್ತಾಗಿ ಸಂಸ್ಕಾರ ನಡೆಸಲು ಹಾಗೂ ಅಂತ್ಯಕ್ರಿಯೆ ನಡೆಸುವ ವೇಳೆ ಬಾಲಕ ಮತ್ತು ಕುಟುಂಬದವರಿಗೆ ಅಗತ್ಯವಿರುವ ಪಿಪಿಇ ಕಿಟ್, ಕಟ್ಟಿಗೆ, ತೈಲ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರು.
ಭದ್ರಾವತಿಯ ವಿಶ್ವಹಿಂದೂ ಪರಿಷತ್, ಬಜರಂಗದಳದ ಪ್ರಮುಖರು ಹಾಗೂ ಕಾರ್ಯಕರ್ತರು ಈ ಕಾರ್ಯವನ್ನು ಮಾಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ಆರ್‌ಎಸ್‌ಎಸ್ ಸುಬ್ಬಣ್ಣ, ರಾಘವನ್, ವಡಿವೇಲು, ಶಿವಶಂಕರ್, ಅರಳೀಹಳ್ಳಿ ದೇವರಾಜ್ ಹಾಗೂ ಭರತ್ ಸೇರಿದಂತೆ ಹಲವರು ಈ ಕಾರ್ಯದಲ್ಲಿ ಭಾಗಿಯಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news










Discussion about this post