ಭದ್ರಾವತಿ: ನಮಗೆ ಎಲ್ಲವನ್ನೂ ನೀಡಿರುವ ಈ ಸಮಾಜಕ್ಕೆ ಸೇವೆ ಮಾಡುವ ಮನೋಭಾವನೆಯಿಂದ ಮಾತ್ರ ಸ್ನೇಹ ಜೀವಿ ಬಳಗಕ್ಕೆ ಯಾರು ಬೇಕಾದರೂ ಸೇರ್ಪಡೆಗೊಳ್ಳಬಹುದು ಎಂದು ಪೊಲೀಸ್ ಉಮೇಶ್ ಕರೆ ನೀಡಿದರು.
7 ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಎಎಪಿ ತೊರೆದ 34 ಮಂದಿ ಸ್ನೇಹಜೀವಿ ಬಳಗಕ್ಕೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸೇವಾ ಕಾರ್ಯವನ್ನು ಗುರುತಿಸಿ ಎಲ್ಲ ಜಾತಿ, ಧರ್ಮದವರು ಸ್ನೇಹ ಜೀವಿ ಬಳಗಕ್ಕೆ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ವಿಚಾರ. ನಮ್ಮ ಬಳಗ ಜಾತ್ಯತೀತವಾಗಿ ಬೆಳೆಯುತ್ತಿದ್ದು, ಸೇವಾ ಮನೋಭಾವನೆಯಿರುವವರು ಮಾತ್ರ ಸೇರ್ಪಡೆಗೊಳ್ಳಬಹುದು ಎಂದರು.
ಸ್ನೇಹ ಜೀವಿ ಬಳಗದ ವತಿಯಿಂದ ಕೊಡುಗೆಯಾಗಿ ನೀಡಿರುವ ಆಂಬುಲೆನ್ಸ್ ಸಾವಿರಾರು ಮಂದಿಗೆ ಸಹಾಯವಾಗುತ್ತಿದೆ. ಇದರಿಂದ ಪ್ರೇರಿತಗೊಂಡು ಮುಂದಿನ ದಿನಗಳಲ್ಲಿ ಇನ್ನೂ 2-3 ಆಂಬುಲೆನ್ಸ್ ಓಡಿಸುವ ಚಿಂತನೆ ನಡೆದಿದೆ ಎಂದರು. ಇನ್ನು, ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಸ್ನೇಹ ಜೀವಿ ಬಳಗದ ವತಿಯಿಂದ ನಿರಂತರವಾಗಿ ಆಹಾರ ಪೊಟ್ಟಣ ವಿತರಣೆ, ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿರುವುದೂ ಸೇರಿದಂತೆ ಹಲವು ರೀತಿಯಲ್ಲಿ ಸಮಾಜಕ್ಕೆ ನೆರವಾಗಿದ್ದೇವೆ. ಇಂತಹ ಸೇವಾ ಕಾರ್ಯಗಳನ್ನು ಮುಂದಿನ ದಿನಗಳಲ್ಲೂ ಹೆಚ್ಚಾಗಿ ನಡೆಸಲಿದ್ದು, ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಎಂದು ವಿನಂತಿಸಿದರು.
ಇತ್ತೀಚೆಗೆ ಅಮ್ ಆದ್ಮಿ ಪಕ್ಷ ತೊರೆದ ವಿ. ವಿನೋದ್,ಮುಳ್ಕೆರೆ ಲೋಕೇಶ್, ಕಾಂತದಿನೇಶ್ ಹಾಗೂ ಪ್ರದೀಪ್ ಅವರುಗಳು ಸ್ನೇಹಜೀವಿ ಬಳಗೆಕ್ಕೆ ಸೇರ್ಪಡೆಗೊಂಡರು. ಇನ್ನು, ಇತ್ತೀಚೆಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ನೇಹಜೀವಿ ಬಳಗದ ವತಿಯಿಂದ ಸ್ಪರ್ಧಿಸಿ ಜಯಗಳಿಸಿದ ಕಲ್ಲಹಳ್ಳಿಯ ಧನುಂಜಯ, ದೇವರಹಳ್ಳಿಯ ನಂದಿನಿ ಬಾಯಿ, ಕಾರೆಹಳ್ಳಿಯ ಜಯಮ್ಮ ಹಾಗೂ ಧರ್ಮಣ್ಣ, ಕಾಳಿಂಗನಹಳ್ಳಿಯ ರೂಪ, ನಾಗತಿಬೆಳಗೊಳಿನ ಲಕ್ಷ್ಮೀ ಹಾಗೂ ಮಂಜುಳ ಅವರುಗಳನ್ನು ಸ್ನೇಹಜೀವಿ ಉಮೇಶ್ ಅವರು ಅಭಿನಂದಿಸಿದರು.
ಸ್ನೇಹಜೀವಿ ಬಳಗದ ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post