ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೂಡ್ಲಿಗಿರೆ ಸಮೀಪದ ಟಿವಿಎಸ್ ಫಾರಂನಲ್ಲಿ ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ. ಸುಜಾತಮ್ಮನವರ ತೋಟದ ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾತ್ರಿ 9:28ರ ಸಮಯದಲ್ಲಿ ನಾಯಿಗಳು ಏಕಾಏಕಿ ಬೊಗಳಿದ ಕಾರಣ ಅದನ್ನು ನೋಡಲು ಬಾಗಿಲ ಬಳಿ ಬಂದು ಒಳಗಿನಿಂದಲೇ ಗಮನಿಸಿದಾಗ ಚಿರತೆಯನ್ನು ಕಂಡು ಭಯಪೀಡಿತರಾಗಿದ್ದಾರೆ.
ಬಳಿಕ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆಯು 3-4 ಬಾರಿ ಮನೆ ಸುತ್ತ ಓಡಾಡಿರುವ ದೃಶ್ಯ ಕಂಡು ಬಂದಿದೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post