ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಈ ಬಾರಿಯ ಚುನಾವಣೆಯಲ್ಲಿ ಗೆದ್ದು ನಾಲ್ಕನೆಯ ಶಾಸಕರಾಗಿ ಆಯ್ಕೆಯಾಗಿರುವ ಬಿ.ಕೆ. ಸಂಗಮೇಶ್ವರ್ #BKSangameshwara ಅವರು ಈ ಬಾರಿ ರಾಜ್ಯ ಸಚಿವರಾಗಲಿ ಎಂಬ ಕೂಗು ಬಲವಾಗಿದೆ.
ಈ ಹಿಂದೆ ಸಂಗಮೇಶ್ವರ್ ಅವರು ಮೂರು ಬಾರಿ ಶಾಸಕರಾಗಿದ್ದರು. ಈ ಬಾರಿ ನಡೆದ ಚುನಾವಣೆಯಲ್ಲೂ ಸಹ ಆಯ್ಕೆಯಾಗುವ ಮೂಲಕ ನಾಲ್ಕನೆಯ ಬರಿ ವಿಧಾನಸಭೆ ಪ್ರವೇಶಿಸಿದ್ದು, ಈ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಸಹ ಎಂದಿಗೂ ಜನರಿಗೆ ಸ್ಪಂಧಿಸುವುದನ್ನು ಅವರು ನಿಲ್ಲಿಸಲಿಲ್ಲ. ಕ್ಷೇತ್ರದಲ್ಲಿ ಯಾವುದೇ ಸಭೆ-ಸಮಾರಂಭಗಳು ನಡೆದರೂ, ವೈಯಕ್ತಿಕ ಕಾರ್ಯಕ್ರಮಗಳಿಗೆ ಆಹ್ವಾನ ಬಂದರೂ ಪಾಲ್ಗೊಳ್ಳದೇ ಇಲ್ಲ. ಅದು ಕ್ಷೇತ್ರದಿಂದ ಹೊರ ಊರಿನಲ್ಲಿ ಕಾರ್ಯಕ್ರಮವಿದ್ದರೂ ಸರಿ ಒಂದು ವೇಳೆ ಸಂಗಮೇಶ್ವರ್ ಅವರಿಗೆ ತೆರಳಲು ಸಾಧ್ಯವಾಗದಿದ್ದರೆ, ಅವರ ಕುಟುಂಬಸ್ಥರಲ್ಲಿ ಯಾರಾದರೂ ಒಬ್ಬರು ಪಾಲ್ಗೊಳ್ಳುವುದನ್ನು ತಪ್ಪಿಸುವುದಿಲ್ಲ ಎಂಬುದು ವಿಶೇಷ.
ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಿದ್ದರೂ ಚುನಾವಣಾ ಪ್ರಚಾರದ ವಿಚಾರದಲ್ಲೂ ಸಹ ಸಂಗಮೇಶ್ವರ್ ರಾಜಿಯಾಗಿಲ್ಲ. ಪ್ರತಿ ದಿನ ಸಂಜೆ 4 ಗಂಟೆಯಿಂದ ಆರಂಭಿಸಿ, ತಡರಾತ್ರಿಯವರೆಗೂ ಪ್ರಚಾರ ನಡೆಸಿದ್ದರು. ಗ್ರಾಮೀಣ ಭಾಗದಲ್ಲೂ ಸಹ ಬೀದಿ ಬೀದಿಗಳಿಗೆ ತೆರಳಿ ಸ್ವತಃ ತೆರಳಿ ಮತ ಯಾಚಿಸಿದ್ದರು.
ಪ್ರತಿಯೊಬ್ಬರಿಗೂ ದೊರೆಯುವ ಶಾಸಕ
ಇನ್ನು, ಶಾಸಕರ ನಿವಾಸ ಹಾಗೂ ಗೃಹ ಕಚೇರಿ ಎಲ್ಲ ಸಾರ್ವಜನಿಕರಿಗೆ ಸದಾ ತೆರೆದಿರುತ್ತದೆ. ಗೃಹ ಕಚೇರಿ ಮುಂಭಾಗದಲ್ಲಿ ಸ್ವತಃ ಶಾಸಕರೇ ಕುಳಿತು ಬಂದ ಪ್ರತಿಯೊಬ್ಬರನ್ನೂ ಮಾತನಾಡಿಸಿ, ಅವರ ಕೆಲಸ ಮಾಡಿಕೊಡುವಷ್ಟು ಸರಳತೆ. ಯಾವುದೇ ಹೊತ್ತಿನಲ್ಲಿ ಅವರ ನಿವಾಸಕ್ಕೆ ಸಾರ್ವಜನಿಕರು ತೆರಳಿದರೂ ಅವರ ಕುಟುಂಬಸ್ಥರು ಒಬ್ಬರಾದರೂ ಸ್ಪಂಧಿಸುತ್ತಾರೆ ಎಂಬುದು ಬಹಳಷ್ಟು ಜನರ ಅಂಬೋಣ.
ಭದ್ರಾವತಿಯಲ್ಲಿ ಹಿಂದೆ ಸಂಗಮೇಶ್ವರ್ ಗೆಲುವು ಸಾಧಿಸಿದ ಅವಧಿಯಲ್ಲೆಲ್ಲಾ ಬೇರೆ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಹೀಗಾಗಿ, ಅಭಿವೃದ್ಧಿಗೆ ಬಹಳಷ್ಟು ತೊಡಕಾಗಿತ್ತು. ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿದೆ. ಕ್ಷೇತ್ರದಲ್ಲಿ ಆಗಬೇಕಾಗಿರುವ ಬಹಳಷ್ಟು ಅಭಿವೃದ್ಧಿ ಕಾರ್ಯಗಳಿವೆ.
ಉದ್ಯೋಗ ಸೃಷ್ಠಿ, ಉನ್ನತ ದರ್ಜೆಯ ಆಸ್ಪತ್ರೆ, ಉನ್ನತ ಶಿಕ್ಷಣಕ್ಕಾಗಿ ಕಾಲೇಜುಗಳು ಸೇರಿದಂತೆ ಹಲವು ಕೆಲಸಗಳು ಆಗಬೇಕಿದೆ. ಈ ಬಾರಿ ಸಂಗಮೇಶ್ವರ್ ಸಚಿವರಾದರೆ ಇವಕ್ಕೆಲ್ಲಾ ಚಾಲನೆ ದೊರೆಯಲಿದೆ. ಹೀಗಾಗಿ, ಈ ಬಾರಿಯ ಸಂಪುಟದಲ್ಲಿ ಸಂಗಮೇಶ್ವರ್ ಅವರನ್ನು ಸಚಿವರನ್ನಾಗಿ ಮಾಡಲೇಬೇಕು ಎಂಬ ಒತ್ತಡ ಕ್ಷೇತ್ರದಲ್ಲಿ ಹೆಚ್ಚಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post