ಭದ್ರಾವತಿ: ದಸರಾ ನಾಡಹಬ್ಬ ಅಂಗವಾಗಿ ನಗರಸಭೆ ಹಮ್ಮಿಕೊಂಡಿರುವ 9 ದಿನಗಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ 6 ನೇ ದಿನ ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಮಹಿಳಾ ದಸರಾ ಕ್ರೀಡಾಕೂಟವನ್ನು ಚೆಂಡು ಎಸೆಯುವ ಮೂಲಕ ಪೌರಾಯುಕ್ತ ಮನೋಹರ್ ಚಾಲನೆ ನೀಡಿದರು.
ಪೌರಾಯುಕ್ತ ಮನೋಹರ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡುವುದರ ಜೊತೆಗೆ ಸಾಂಸ್ಕೃತಿಕವಾಗಿ ವಿಶೇಷ ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡಲು ನವರಾತ್ರಿ ಸಂಭ್ರಮದಲ್ಲಿ ವಿಶೇಷವಾಗಿ ಮಹಿಳಾ ದಸರಾ ಮತ್ತು ಕ್ರೀಡಾಕೂಟ ಹಾಗು ಅನೇಕ ಜನಮೆಚ್ಚುವ ಸಾಂಸ್ಕೃತಿಕ ಚಟುವಟಿಕೆಗಳ ಕಲಾ ಪ್ರತಿಭೆ ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.ಕ್ರೀಡಾಕೂಟದಲ್ಲಿ ಹಳೇನಗರದ ಮಹಿಳಾ ಸೇವಾ ಸಮಾಜ, ಶಾಶ್ವತಿ ಮಹಿಳಾ ಸಮಾಜ, ಶ್ರೀ ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಮಹಿಳಾ ಘಟಕ, ವೀರಶೈವ ಮಹಿಳಾ ಸಮಾಜ, ಜೇಸಿ ಮಹಿಳಾ ಘಟಕ, ಪತಾಂಜಲಿ ಯೋಗ ಕೇಂದ್ರ, ಕರಾವಳಿ ಮಹಿಳಾ ಸಂಘ, ಕೇರಳ ಮಹಿಳಾ ಸಮಾಜಂ ಸೇರಿದಂತೆ ಅನೇಕ ಮಹಿಳಾ ಘಟಕಗಳ ನೂರಾರು ಮಹಿಳೆಯರು ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದರು.
ನಗರಸಭೆಯ ಮಾಜಿ ಅಧ್ಯಕ್ಷರುಗಳಾದ ಹಾಲಮ್ಮ, ವಿಶಾಲಾಕ್ಷಿ, ಲೀಲಾವತಿ, ಸುಧಾಮಣಿ, ಉಪಾಧ್ಯಕ್ಷರುಗಳಾದ ವಿದ್ಯಾಶ್ರೀ, ಮಹಾದೇವಿ, ಮಾಜಿ ಸದಸ್ಯರಾದ ಲಕ್ಷ್ಮೀದೇವಿ, ಶೋಭಾ, ಅಧಿಕಾರಿಗಳಾದ ಸಯಾದ್ ಮಹಮೂದ್ ಅಲಿ, ರುದ್ರೇಗೌಡ, ಸುವಾಸಿನಿ, ಸುನಿತಾ ಕುಮಾರಿ, ರಾಜಕುಮಾರ್, ಆಂಜನೇಯ ಸ್ವಾಮಿ, ಮುಖಂಡರಾದ ನರಸಿಂಹಾಚಾರ್, ಜಿ. ರಮಾಕಾಂತ್ ಮುಂತಾದವರು ಭಾಗವಹಿಸಿದ್ದರು.
ಮಹಿಳಾ ದಸರಾ ಕ್ರೀಡಾಕೂಟ ಫಲಿತಾಂಶ
ನಗರಸಭೆಯು ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಡೆಸಿದ ಮಹಿಳಾ ದಸರಾ ಕ್ರೀಡಾಕೂಟದಲ್ಲಿ ಈ ಕೆಳಕಂಡವರು ವಿವಿಧ ಕ್ರೀಡೆಗಳಲ್ಲಿ ವಿಜೇತರಾಗಿದ್ದಾರೆ.
ಬಾಂಬ್ ಇನ್ ದ ಸಿಟಿ ಸ್ಪರ್ಧೆಯಲ್ಲಿ ಗೃಹ ರಕ್ಷಕದಳದ ಮಂಜುಳಾ ಪ್ರಥಮ, ತಿಮ್ಲಾಪುರದ ವನಸಿರಿ ಸ್ವಸಹಾಯ ಸಂಘದ ಮಣಿ ಮಂಜುನಾಥ್ ತಿಮ್ಲಾಪುರ, ದ್ವಿತೀಯ ಹಾಗೂ ಗೃಹರಕ್ಷಕ ದಳದ ಪ್ರಭಾವತಿ ತೃತೀಯ ಸ್ಥಾನ ತನ್ನದಾಗಿಸಿಕೊಂಡರೆ, ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಮಣಿ ಮಂಜುನಾಥ್ ತಿಮ್ಲಾಪುರ ಪ್ರಥಮ, ಮಾಜಿ ನಗರಸಭಾಧ್ಯಕ್ಷೆ ವಿಶಾಲಾಕ್ಷಿ ದ್ವಿತೀಯ, ಗೃಹ ರಕ್ಷಕದಳದ ಜಯಶ್ರೀ ತೃತೀಯ ಸ್ಥಾನ ಗಳಿಸಿಕೊಂಡು, ಪಾಸ್ ಇನ್ ದ ಬಾಲ್ ಸ್ಪರ್ಧೆಯಲ್ಲಿ ಸಿದ್ದಾರೂಢ ನಗರದ ಸಿ.ಜಿ.ಸರೋಜ ಪ್ರಥಮ, ಯಶೋದ ನಾಗರಾಜ್ ದ್ವಿತೀಯ ಹಾಗು ನ್ಯೂಟೌನ್‌ನ ಶೃತಿ ಗಿರೀಶ್ ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ತೀರ್ಪುಗಾರರಾಗಿ ಶಿವಲಿಂಗೇಗೌಡ, ಸಿ. ಮಹೇಂದ್ರ, ಕರಣ್ ಸಿಂಗ್, ಶ್ರೀಕಾಂತ್, ದೇವರಾಜ್ ಹಾಗೂ ಹಾಲೇಶಪ್ಪ ಕಾರ್ಯನಿರ್ವಹಿಸಿದರು. ಮೇಲ್ವಿಚಾರಕರಾಗಿ ಸುವಾಸಿನಿ, ಸುನಿತಾ ಕುಮಾರಿ, ರಾಜಕುಮಾರ್, ರುದ್ರೇಗೌಡ, ಸಯದ್ ಮಹಮೂದ್ ಆಲಿ ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post