ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರ, ಕಾರ್ಮಿಕರ ಮತ್ತು ರೈತರ ವಿರೋಧಿ ಸರ್ಕಾರಗಳಾಗಿದ್ದು, ಈ ಎರಡು ಸರ್ಕಾರಗಳು ಜನವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಆರೋಪಿಸಿದರು.
ಯುವ ಕಾಂಗ್ರೆಸ್ ವತಿಯಿಂದ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ದೇಶಾದ್ಯಂತ ಕರೆ ನೀಡಲಾಗಿದ್ದ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಪ್ರಸ್ತುತ ದೇಶದಲ್ಲಿ ಬಡವರು, ಕಾರ್ಮಿಕರು ಹಾಗೂ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನ ವಿರೋಧಿ ನೀತಿಗಳಿಂದಾಗಿ ನೆಮ್ಮದಿಯಾಗಿ ಬದುಕುವುದು ಅಸಾಧ್ಯವಾಗಿದ್ದು, ತಕ್ಷಣ ಜನ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭಾ ಸದಸ್ಯರಾದ ಮಣೆ ಎಎನ್‌ಎಸ್, ಆರ್. ಶ್ರೇಯಸ್, ಜಾರ್ಜ್, ಸೈಯದ್ ರಿಯಾಜ್ ಅಹಮದ್, ಸುದೀಪ್‌ಕುಮಾರ್, ಬಷೀರ್ ಅಹಮದ್, ಶೃತಿ ವಸಂತ್, ಲತಾ ಚಂದ್ರಶೇಖರ್, ಮಹಮದ್ ಯೂಸಫ್, ಯುವ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್, ಗ್ರಾಮಾಂತರ ಘಟಕದ ಅಧ್ಯಕ್ಷ ಅಫ್ತಾಬ್ ಅಹಮದ್, ಮುಖಂಡರಾದ ಪ್ರವೀಣ್ ಕಲ್ಪನಹಳ್ಳಿ, ಜೆಬಿಟಿ ಬಾಬು, ಎಸ್.ಎನ್ ಶಿವಪ್ಪ, ಬಿ. ಗಂಗಾಧರ್ ಸೇರಿದಂತೆ ಯುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post