ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಎಂಪಿಎಂ ಕಾರ್ಖಾನೆಯ ಬ್ಯಾಕ್‌ಲಾಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ 220 ನೌಕರರ ಸಮಸ್ಯೆ ಬಗ್ಗೆ ಗಮನಹರಿಸಿದ ಶಾಸಕ ಬಿ.ಕೆ.ಸಂಗಮೇಶ್ವರ್ ಇಂದು ಕಾರ್ಖಾನೆಗೆ ಭೇಟಿ ನೀಡಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಬಿ. ಶಿವಕುಮಾರ್ ರೊಂದಿಗೆ ಚರ್ಚೆ ನಡೆಸಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.ಕಾರ್ಮಿಕರ ಬಾಕಿ ಇರುವ 5 ತಿಂಗಳ ವೇತನ ನೀಡುವುದರೊಂದಿಗೆ ಖಾಯಂ ಉದ್ಯೋಗ ಕಲ್ಪಿಸುವಂತೆ ಸೂಚಿಸಿದರು.
ಕಾರ್ಮಿಕ ಮುಖಂಡರಾದ ಜಯಪಾಲ್, ದಿನೇಶ್, ಮಂಜು ಸೇರಿದಂತೆ ಕಾರ್ಮಿಕ ವರ್ಗದವರು ಪ್ರಗತಿಪರ ಮುಖಂಡ ರಾಜು ಉಪಸ್ಥಿತರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post