ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ 4ನೆಯ ವಾರ್ಡ್‌ಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಡಿ.ಎ. ಅನುಪಮ ನಾಮಪತ್ರ ಸಲ್ಲಿಸಿದರು.
ನಗರಸಭೆ 4ನೆಯ ವಾರ್ಡ್‌ಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಡಿ.ಎ ಅನುಪಮ ಒಂದು ನಾಮಪತ್ರ, 12ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ. ಸುದೀಪ್‌ಕುಮಾರ್ ೨ ನಾಮಪತ್ರ, 13ನೆಯ ವಾರ್ಡಿಗೆ ಜೆ. ಅನುಸುಧಾ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ ಹಾಗು ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ, 18ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ನಗರಸಭೆ ಮಾಜಿ ಸದಸ್ಯ ಆರ್. ಕರುಣಾಮೂರ್ತಿ ಒಂದು ನಾಮಪತ್ರ, ಮಾಜಿ ಉಪಮೇಯರ್ ಮಹಮ್ಮದ್ ಸನಾವುಲ್ಲಾ ಪುತ್ರ ಮಹಮ್ಮದ್ ಪರ್ವೀಜ್ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಬಿ ಫಾರಂ ಇಲ್ಲದೆ 26ನೆಯ ವಾರ್ಡಿನ ಜೆಡಿಎಸ್ ಅಭ್ಯರ್ಥಿಯಾಗಿ ಪರಮೇಶ್ವರಿ ಒಂದು ನಾಮಪತ್ರ, 25ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಕೆ. ಉದಯಕುಮಾರ್ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಂಜನಪ್ಪ, 22ನೆಯ ವಾರ್ಡಿಗೆ ಪಕ್ಷೇತರ ಅಭ್ಯರ್ಥಿಯಾಗಿ ನರಸಯ್ಯ ಒಂದು ನಾಮಪತ್ರ, 24ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ. ಮಸ್ತಾನ ಒಂದು ನಾಮಪತ್ರ, 17ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಪ್ಪುಸುಲ್ತಾನ ಶಾಹೇ ಆಲಂ ಒಂದು ನಾಮಪತ್ರ, ೨೦ನೆಯ ವಾರ್ಡಿಗೆ ಹಾಲಿ ನಗರಸಭಾ ಸದಸ್ಯೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮೀ ದೇವಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.
15ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಂ ಮಂಜುಳ 2 ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಒಂದು ನಾಮಪತ್ರ, 16ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುಟ್ಟೇಗೌಡ ಒಂದು ನಾಮಪತ್ರ, ಹಾಲಿ ನಗರಸಭಾ ಸದಸ್ಯೆ ವಿಶಾಲಾಕ್ಷಿ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಎರಡು ನಾಮಪತ್ರ, 34ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ನಗರಸಭಾ ಸದಸ್ಯೆ ಎಂ.ಎಸ್ ಸುಧಾಮಣಿ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ಆರ್ ಲತಾ ಚಂದ್ರಶೇಖರ್ ಒಂದು ನಾಮಪತ್ರ, 33ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ವಿಐಎಸ್‌ಎಲ್ ಕಾರ್ಮಿಕರ ಸಂಘದ ಮಾಜಿ ಅಧ್ಯಕ್ಷ ಜೆ.ಎನ್ ಚಂದ್ರಹಾಸ ಎರಡು ನಾಮಪತ್ರ, 3ನೆಯ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಜೆ. ನಕುಲ್ ಒಂದು ನಾಮಪತ್ರ, 6ನೆಯ ವಾರ್ಡಿಗೆ ಬಿಜೆಪಿ ಪಕ್ಷದ ಅಧಿಕೃತ ಘೋಷಿತ ಅಭ್ಯರ್ಥಿಯಾಗಿರುವ ಕೆ.ಆರ್. ಸತೀಶ್ ಒಂದು ನಾಮಪತ್ರ, ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್. ಶ್ರೇಯಸ್ ಎರಡು ನಾಮಪತ್ರ, ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಚನ್ನಯ್ಯ ಒಂದು ನಾಮಪತ್ರ ಸಲ್ಲಿಸಿದ್ದಾರೆ.
11ನೆಯ ವಾರ್ಡಿಗೆ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಎ. ಪಚ್ಛೆಯಪ್ಪನ್ ಒಂದು ನಾಮಪತ್ರ, 8ನೆಯ ವಾರ್ಡಿಗೆ ಘನಿ ಅಬುಲ್ ಖೈರ್ ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಮಹಮದ್ ಇನಾಯಿತ್ ಒಂದು ನಾಮಪತ್ರ, 7ನೇ ವಾರ್ಡಿಗೆ ಎಂ. ರೇಣುಕಾ ಬಿ ಫಾರಂ ಇಲ್ಲದೆ ಜೆಡಿಎಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ, 5ನೆಯ ವಾರ್ಡಿಗೆ ಕೆ.ಆರ್ ವೇದಾವತಿ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ, ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಂದು ನಾಮಪತ್ರ ಮತ್ತು ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಾ ಬಿ ಫಾರಂ ಇಲ್ಲದೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















