ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ಬಾಬು ಜಗಜೀವನರಾಮ್ ಅವರ 113ನೆಯ ಜನ್ಮ ದಿನವನ್ನು ಆಚರಿಸಲಾಯಿತು.
ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಸಂಸ್ಥೆಯ ಚೇರ್ಮನ್ ಬಿ.ಎಲ್. ರಂಗಸ್ವಾಮಿ, ಬಾಬು ಜಗಜೀವನ ರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರಾಗಿದ್ದು, ಇವರ ಜೀವನವೇ ಸಮಾಜಕ್ಕೆ ಒಂದು ಆದರ್ಶ ಎಂದರು.
ವಿದ್ಯಾಸಂಸ್ಥೆಯ ಸಹಾಯಕ ಆಡಳಿತಾಧಿಕಾರಿಗಳಾದ ಶಿವಲಿಂಗೇಗೌಡ, ಬಿಇಡಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಎಂ. ಚೈತ್ರ, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಮುಖ್ಯಸ್ಥರಾದ ಎಂ.ಎಚ್. ಶಕುಂತಲಾ ಎಂ. ಹೇಮಾವತಿ, ಜೆಸಿಂತಾ ಹಾಗೂ ಕೆ. ಚೈತ್ರ ಅವರುಗಳು ಹಾಗೂ ಎಲ್ಲಾ ವಿಭಾಗಗಳ ಉಪನ್ಯಾಸ, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಿಕ್ಷಕರುಗಳಾದ ಸಮೀನ ಯಾಸ್ಮಿನ್ ಹಾಗೂ ಭವಾನಿ ಬಾಯಿಯವರು ದಿನದ ವಿಶೇಷತೆಯ ಬಗ್ಗೆ ಮಾತನಾಡಿದರು. ಶಿಕ್ಷಕಿ ಟಿ.ಎಸ್. ವತ್ಸಲಾ ದೇವಿ ಪ್ರಾರ್ಥಿಸಿ, ಎಂ.ಎಸ್. ಮಂಜುನಾಥ ಸ್ವಾಗತಿಸಿದರು ಶಶಿಕಲಾ ವಂದಿಸಿ, ಎಚ್.ಪಿ. ಚಂದ್ರಕಲಾ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post