ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸಂಜಯ್ ಇವೆಂಟ್ ಡೆಕೊರೇಟರ್ಸ್ ವತಿಯಿಂದ ರೂಪಿಸಿರುವ ನೂತನ ವರ್ಷದ ಕ್ಯಾಲೆಂಡರ್ ನಿನ್ನೆ ಬಿಡುಗಡೆಗೊಂಡಿದೆ.

ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ನಡೆದ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಜಿ. ರಾಮಪ್ಪ ಹಾಗೂ ಕರ್ನಾಟಕ ನಗರ ನೀರೂ ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರೇತರ ನಿರ್ದೇಶಕ ಎಂ.ಜಿ. ಮಂಗೋಟೆ ರುದ್ರೇಶ್ ಅವರು ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಅರ್ಚಕ ಶ್ರೀನಿವಾಸ್, ವಿಎಚ್’ಪಿ ಜಿಲ್ಲಾ ಸಂಯೋಜಕ ಸುನೀಲ್, ತಾಲೂಕು ಸಂಯೋಜಕ ವಡಿವೇಲು ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















