ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭೂತನಗುಡಿಯಲ್ಲಿನ ಕನ್ಸರ್’ವೆನ್ಸಿ ಅಭಿವೃದ್ಧಿ ಕಾಮಗಾರಿಯ ಹಿನ್ನೆಲೆಯಲ್ಲಿ ಏಪ್ರಿಲ್ 20 ರ ಭಾನುವಾರ ಭದ್ರಾವತಿಯ ಕೆಲ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ.
ಭದ್ರಾವತಿ ನಗರಸಭೆಯ ಹಳೇನಗರ ವ್ಯಾಪ್ತಿಯ ವಾರ್ಡ್ ನಂ 13 ರ ಭೂತನಗುಡಿ ನಗರಸಭೆ ಪಕ್ಕದ ಕನ್ಸರ್’ವೆನ್ಸಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಭಿವೃದ್ಧಿ ಕಾಮಗಾರಿಗೆ ಅಡ್ಡಲಾಗಿರುವ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸಲಾಗುತ್ತಿದೆ.
Also read: ಎರಡು ಬೈಕ್ಗಳ ನಡುವೆ ಡಿಕ್ಕಿ: ಸವಾರರಿಗೆ ಗಾಯ | ಆಸ್ಪತ್ರೆಗೆ ದಾಖಲು
ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭೂತನಗುಡಿ, ಮಾಧವಚಾರ್ ಸರ್ಕಲ್, ನಗರಸಭೆ ಸುತ್ತಮುತ್ತ, ಮಾಧವ ನಗರ, ಗಾಂಧಿನಗರ, ಗಾಂಧಿಸರ್ಕಲ್, ಹಳೇ ಸಂತೆ ಮೈದಾನ ರಸ್ತೆ, ಕೋಡಿಹಳ್ಳಿ, ಗೌರಾಪುರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post