ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕಾರ್ತಿಕ ಶುದ್ಧ ದಶಮಿ ಅ.31ರ ಶುಕ್ರವಾರ ಸುಳಾದಿ ದಾಸರೆಂದೇ ಖ್ಯಾತರಾದ ಶ್ರೀವಿಜಯ ದಾಸರ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ಮಾಧ್ವ ಮಹಾ ಮಂಡಳಿ ತಿಳಿಸಿದೆ.
ಅ.31ರ ಶುಕ್ರವಾರ ಬೆಳಗ್ಗೆ 9ಕ್ಕೆ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪ್ರಾಕಾರದಲ್ಲಿ ಯಾಯೀವಾರ (ನಗರ ಸಂಕೀರ್ತನೆ) ಜರುಗಲಿದೆ.

ತದನಂತರ ಅಷ್ಟಾವಧಾನ, ವಿಶೇಷ ಮಂಗಳಾರತಿ, ತೀರ್ಥ ಪ್ರಸಾದ ಹೀಗೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಸರ್ವ ಆಸ್ತಿಕ ಮಹಾಶಯರು ದಾಸವರೇಣ್ಯರ ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿ ಭಗವಂತನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post