ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹೋಳಿ ಹಬ್ಬದ #HoliFestival ಪ್ರಯುಕ್ತ ನಗರದ ಹಲವು ಕಡೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮನ್ಮಥಮೂರ್ತಿಗಳನ್ನು ಮೆರವಣಿಗೆ ಮಾಡಿ, ಕಾಮದಹನ ಮಾಡಿ, ಹೋಳಿ ಹಾಡಿ ಸಂಭ್ರಮಿಸಲಾಯಿತು.
ಕಳೆದ ನಾಲ್ಕು ದಿನಗಳಿಂದಲೂ ಹಲವು ಕಡೆಗಳಲ್ಲಿ ರತಿಮನ್ಮಥ #RathiManmatha ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಇಂದು ಕಾಮದಹನ ಮಾಡಿ, ಹೋಳಿ ಆಡಿ ಸಂಭ್ರಮಿಸಲಾಯಿತು.
Also read: ನಾಲ್ವರು ಭಯೋತ್ಪಾದಕರ ಹೆಡೆಮುರಿ ಕಟ್ಟಿದ ಸೇನೆ | ಅಪಾರ ಶಸ್ತ್ರಾಸ್ತ್ರ ಸೀಜ್
ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಸಮೀಪ ಪ್ರತಿಷ್ಠಾಪಿಸಲಾಗಿದ್ದ ಪೇಟೆಬೀದಿ ಕಾಮಣ್ಣ, ಬ್ರಾಹ್ಮಣರ ಬೀದಿ ಕಾಮಣ್ಣ, ಕುಂಬಾರಬೀದಿ ಕಾಮಣ್ಣ ಮೂರ್ತಿಗಳನ್ನು ಮೂರು ಪ್ರತ್ಯೇಕ ಗಾಡಿಗಳಲ್ಲಿ ಕೂರಿಸಿ ಅದನ್ನು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ರಸ್ತೆ, ರಥಬೀದಿ, ಹಳದಮ್ಮನ ಬೀದಿ, ಪೇಟೆ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಸಲಾಯಿತು.
ನಂತರ ನಿಗದಿತ ಸ್ಥಳದಲ್ಲಿ ಕಾಮದಹನ ಮಾಡಿ, ಪರಸ್ಪರ ಬಣ್ಣವನ್ನು ಎರೆಚುತ್ತಾ ಹೋಳಿ ಹಬ್ಬವನ್ನು ಆಚರಿಸಲಾಯಿತು. ಮೆರವಣಿಗೆಯಲ್ಲಿ ಮಕ್ಕಳು ಯುವಕರು ನರ್ತಿಸುತ್ತಾ ಬಣ್ಣದಾಟ ಆಡುತ್ತಾ ಭಾಗವಹಿಸಿದ್ದರು.
ಕಾಮದಹನವಾದ ನಂತರ ಪೇಟೆ ಬೀದಿ ಕಾಮಣ್ಣ ಸಮಿತಿಯವರು ಪೇಟೆ ಬೀದಿಯಲ್ಲಿ ವಿಶಾಲವಾಗಿ ಹಾಕಿದ್ದ ನೀರಿನ ಕಾರಂಜಿಯ ಚಪ್ಪರದಡಿಯಲ್ಲಿ ಸುರಿಯುವ ನೀರಿಗೆ ಮೈಯೊಡ್ಡಿ, ಧ್ವನಿವರ್ಧಕದಲ್ಲಿ ಬರುತ್ತಿದ್ದ ಚಲನಚಿತ್ರದ ಹಾಡಿನ ಜೋಷ್’ಗೆ ನೂರಾರು ಯುವತಿಯರು, ಮಹಿಳೆಯರು, ಯುವಕರು, ಪುರುಷರು, ಮಕ್ಕಳು ಕುಣಿಯುತ್ತಾ ಹೋಳಿಹಬ್ಬದ ಸಂಭ್ರಮವನ್ನು ಅನುಭವಿಸಿದರು.
ನಗರಸಭೆ ಸದಸ್ಯೆ ಅನುಪಮಾ ಚನ್ನೇಶ್, ಬಿಜೆಪಿಯ ಚನ್ನೇಶ್, ರಂಗನಾಥ, ನಾಗರಾಜ, ಚಂದ್ರಶೇಖರ್, ವಿಶಂಕರ್, ತೋಟಪ್ಪಯ್ಯ, ಉದಯಕುಮಾರ್, ರೇವಣ್ಣ, ಲೋಕೇಶ್, ಮಂಜುನಾಥ್, ಉಮೇಶ್, ಗುರುಮೂರ್ತಿ, ಸಂತೋಷ್, ಬಸವರಾಜ್ ಸೇರಿದಂತೆ ಅನೇಕ ಮುಖಂಡರು ವಿವಿಧ ಮನ್ಮಥ ಸಮಿತಿಯ ಪದಾಧಿಕಾರಿಗಳು ಸಹ ಭಾಗವಹಿಸಿದ್ದರು.
ಭೂತನಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಮನ್ಮಥಮೂರ್ತಿಯನ್ನು ಸಹ ನಗರದ ಪ್ರಮುಖಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಾಮದಹನ ಮಾಡಿ ಹೋಳಿ ಆಡುವ ಮೂಲಕ ಹೋಳಿಹಬ್ಬವನ್ನು ಯುವಕ, ಯುವತಿಯರು, ಮಕ್ಕಳು ಆಚರಿಸಿದರು.
ಭೂತನಗುಡಿ ಕಾಮಣ್ಣ
ಭೂತನಗುಡಿ ಬಡಾವಣೆಯಲ್ಲಿ ಕೂಲಿಂಗ್ಲಾಸ್ ಧರಿಸಿರುವ ಸ್ಟೈಲಿಷ್ ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿತ್ತು.
ಮನ್ಮಥಮೂರ್ತಿಯ ಮೆರವಣಿಗೆಯನ್ನು ನಡೆಸಿ ನಂತರ ಕಾಮದಹನ ಮಾಡಿ, ಹೋಳಿ ಆಡಿ ಸಂಭ್ರಮಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post