ಕಲ್ಪ ಮೀಡಿಯಾ ಹೌಸ್ | ಕೂಡ್ಲಿಗೆರೆ(ಭದ್ರಾವತಿ) |
ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷೆಯಾಗಿ ಪಾರ್ವತಿ ಬಾಯಿ ನಂಜನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಒಪ್ಪಂದವಾದಂತೆ ನಿಕಟಪೂರ್ವ ಅಧ್ಯಕ್ಷೆ ಉಮಾದೇವಿ ಅವರು ತಮ್ಮ ಅವಧಿ ಮುಕ್ತಾಯವಾದ ನಂತರ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಅವರ ಸಮ್ಮುಖದಲ್ಲಿ ಚುನಾವಣೆ ನಡೆದಿದ್ದು, ಪಾರ್ವತಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪ್ರಭಾರಿ ಅಧ್ಯಕ್ಷರಾಗಿದ್ದ ನಾಗರಾಜ ಗೌಡ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಪಂಚಾಯ್ತಿಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಈ ಬಾರಿಯೂ ಸುಲಭವಾಗಿ ಅಧಿಕಾರ ಪಡೆದುಕೊಂಡಿತು.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ನಾಗರಾಜ್ ಗೌಡ, ಮಾಜಿ ಅಧ್ಯಕ್ಷರಾದ ಉಮಾದೇವಿ, ಮಲಕ್, ಜಯಣ್ಣ ಮಾಜಿ ಉಪಾಧ್ಯಕ್ಷರಾದ ಕುಬೇರ ನಾಯ್ಕ, ಸದಸ್ಯರಾದ ಸ್ವಾಮೀನಾಥಾನ್, ರುದ್ರೇಶ, ವಿಶ್ವನಾಥ, ನೀಲಬಾಯಿ, ಗೌರಮ್ಮ, ಸಿದ್ದಮ್ಮ, ಭಾಗ್ಯಮ್ಮ ವಿ.ಎಸ್’ಎಸ್’ಎನ್ ಅಧ್ಯಕ್ಷರಾದ ಎನ್.ಎಚ್. ಮಹೇಶಣ್ಣ, ಗ್ರಾಮದ ಪ್ರಮುಖರಾದ ಕಿರ್ಯಾನಾಯ್ಕ, ಟಾಕ್ರ ನಾಯ್ಕ , ದೇವೇಂದ್ರಪ್ಪ, ವೀರಪ್ಪನ್, ತಿಪ್ಪೇಶ್, ನಾಗೇಶ್, ರಾಮಚಂದ್ರಪ್ಪ, ಅರಕೆರೆ ಲಕ್ಷ್ಮೀಪತಿ,ಪ್ರವೀಣ್ ನಾಯ್ಕ, ಕೋಡಿಹಳ್ಳಿ, ಕಲ್ಪನಹಳ್ಳಿ ಹಾಗೂ ಕೂಡ್ಲಿಗೆರೆಯ ಗ್ರಾಮಸ್ಥರು ಶುಭ ಕೋರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post