ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪ್ರಕೃತಿಯ ಉಳಿವಿಗಾಗಿ ಸದ್ದಿಲ್ಲದೇ ಕಾರ್ಯ ನಿರ್ವಹಿಸುತ್ತಿರುವ ರಾಮ್ ಸೇನಾ ಕರ್ನಾಟಕದ ಭದ್ರಾವತಿ ಘಟಕದ ವತಿಯಿಂದ ವೃಕ್ಷೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಮೂಲ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಅಭಿಪ್ರಾಯ ಹಂಚಿಕೊಂಡ ರಾಮ್ ಸೇನಾ ಕಾರ್ಯಕರ್ತರು, ಪ್ರಕೃತಿ ಮುನಿದರೆ ಮನುಷ್ಯನಿಗೆ ಉಳಿಗಾಲವಿಲ್ಲ ಎಂಬುವುದನ್ನು ಹಲವಾರು ಬಾರಿ ಕಾರ್ಯರೂಪದಲ್ಲಿ ಮನುಷ್ಯನಿಗೆ ಪ್ರಕೃತಿ ತೋರಿಸಿಕೊಟ್ಟಿದೆ. ಪ್ರಕೃತಿಯನ್ನು ಪೂಜಿಸಿ ಆರಾಧಿಸಬೇಕು. ಅದನ್ನು ಸ್ವಚ್ಛ ಮತ್ತು ಶುದ್ದ ರೂಪದಲ್ಲಿ ಕಾಪಾಡಬೇಕಾದುದು ಮಾನವನ ಕರ್ತವ್ಯವು ಹೌದು. ಕಾಲ ಬದಲಾದಂತೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ಮೇಲೆ ಸವಾರಿ ಮಾಡಲು ಹೊರಟಿರುವ ಪರಿಣಾಮ ಮತ್ತು ಅನಾಚಾರಗಳಿಗೆ ಇಂದು ಕೊರೋನಾ ಎಂಬ ಮಹಾಮಾರಿ ರೋಗವು ಮಾನವ ಕುಲವನ್ನು ಬಲಿ ಪಡೆಯುತ್ತಿದೆ. ಇಂತಹ ಪರಿಸ್ಥಿತಿಯನ್ನು ಬದಲಾಯಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ ವನಮಹೋತ್ಸವ ಆಚರಿಸಲಾಗುತ್ತದೆ ಎಂದರು.
ಜಿಲ್ಲಾಧ್ಯಕ್ಷ ಉಮೇಶ್ ಗೌಡ, ತಾಲೂಕು ಅಧ್ಯಕ್ಷ ಸಚಿನ್ ವರ್ಣೇಕರ್, ತರೀಕೆರೆ ತಾಲೂಕು ಅಧ್ಯಕ್ಷ ಗುರು, ಮೂಲ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಅರ್ಚಕ ಕೇಶವಮೂರ್ತಿ, ಸಮಸ್ತ ರಾಮ್ ಸೇನಾ ಕಾರ್ಯಕರ್ತರು ಮುಖ್ಯ ಪದಾಧಿಕಾರಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದರು.
Get In Touch With Us info@kalpa.news Whatsapp: 9481252093
Discussion about this post