ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೇನಗರದ ನಿವಾಸಿ, ಸೂಕ್ಷ್ಮ ಕೆತ್ತನೆಗಳ ಕಲಾವಿದ ಸಚಿನ್ ಎಂ. ವರ್ಣೇಕರ್‌ರವರ ಎರಡು ಕಲಾಕೃತಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ Shri Kshetra Dharmastala ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದುಕೊಂಡಿವೆ.
ವರ್ಣೇಕರ್‌ರವರು ಈ ಹಿಂದೆ ಕಾರ್ಗಿಲ್ ಯೋಧರ ಸ್ಮರಣೆಗಾಗಿ ಅತಿ ಚಿಕ್ಕದಾದ 0.8ಇಂಚು ಎತ್ತರ ಮತ್ತು 0.240 ಗ್ರಾಂ. ತೂಕದ ಬಂಗಾರದಿಂದ ಕಲಾಕೃತಿ ರಚಿಸಿದ್ದರು. ಇದೆ ರೀತಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ 5.20 ಎಂ.ಎಂ ಎತ್ತರ ಮತ್ತು 0.038ಗ್ರಾಂ ತೂಕದ ಬಂಗಾರದ ವರ್ಡ್ ಕಪ್ ಕಲಾಕೃತಿ ರಚಿಸಿದ್ದರು. ಈ ಎರಡು ಕಲಾಕೃತಿಗಳು ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಅಲಂಕರಿಸಿವೆ.
ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಡೆಯವರಿಗೆ ಈ ಎರಡು ಕಲಾಕೃತಿಗಳನ್ನು ವರ್ಣೇಕರ್ ಹಸ್ತಾಂತರಿಸುವ ಮೂಲಕ ಪ್ರಶಂಸನಾ ಪತ್ರ ಪಡೆದುಕೊಂಡರು.
Also read: ವಿದ್ಯುದೀಕರಣದಲ್ಲಿ ನೈಋತ್ಯ ರೈಲ್ವೆಯಿಂದ ಗುರಿ ಮೀರಿದ ಸಾಧನೆ: ಅನೀಶ ಹೆಗಡೆ
ವರ್ಣೇಕರ್‌ರವರು ಅತಿ ಚಿಕ್ಕದಾದ ಶಿವಲಿಂಗ, ಅಯೋಧ್ಯೆ ರಾಮಮಂದಿರ, ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ಕಲಾಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post