ಕಲ್ಪ ಮೀಡಿಯಾ ಹೌಸ್ | ಭದ್ರಾವತಿ/ಶಿವಮೊಗ್ಗ |
ಶಿವಮೊಗ್ಗ ರೌಂಡ್ ಟೇಬಲ್ 166 ಹಾಗೂ ಮೈಸೂರು ಎಲೈಟ್ ರೌಂಡ್ ಟೇಬಲ್ 256 ಸಂಯುಕ್ತಾಶ್ರಯದಲ್ಲಿ ಭದ್ರಾವತಿಯ ನಿರ್ಮಲಾ ಆಸ್ಪತ್ರೆಗೆ ಬಯೋಕ್ಲಿನಿಕಲ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಗಿದೆ.
ಸುಮಾರು 5 ಲಕ್ಷ ರೂ. ಬೆಲೆಯ ಬಯೋಕ್ಲಿನಿಕಲ್ ಯಂತ್ರವನ್ನು ಕೊಡುಗೆಯನ್ನಾಗಿ ನೀಡಲಾಗಿದ್ದು, ಇಂದು ಹಸ್ತಾಂತರಿಸಲಾಯಿತು.
Also read: ಕಾಂತೇಶ್’ಗೆ ಹಾವೇರಿ ಟಿಕೇಟ್ ಸಿಕ್ಕಿದ್ದರೆ ಈಶ್ವರಪ್ಪನವರು ಬಂಡಾಯವೇಳುತ್ತಿದ್ದರೆ? ಸಿದ್ರಾಮಣ್ಣ ಪ್ರಶ್ನೆ
ಈ ಸಂದರ್ಭದಲ್ಲಿ ಶಿವಮೊಗ್ಗ ರೌಂಡ್ ಟೇಬಲ್ 166 ರ ಚೇರ್ಮನ್ ವಿಶ್ವಾಸ್ ಕಾಮತ್, ಕಾರ್ಯದರ್ಶಿ ಈಶ್ವರ್ ಸರ್ಜಿ, ವಲಯ 13 ರ ಛೇರ್ಮನ್ ದೇವಾನಂದ್, ಮೈಸೂರು ಎಲೈಟ್ ರೌಂಡ್ ಟೇಬಲ್ 256 ರ ಛೇರ್ಮನ್ ಜೈಚೋಪ್ರಾ, ಲೇಡಿ ಸರ್ಕಲ್ ಮುಖ್ಯಸ್ಥೆ ಗರೀಮಾ ಚೋಪ್ರಾ, ನಿರ್ಮಲಾ ಆಸ್ಪತ್ರೆಯ ಸಿಸ್ಟರ್ ಹಿಲರಿ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post