ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಪಂ ಅಧ್ಯಕ್ಷರಾಗಿ ಅಂತರಗಂಗೆ ಗ್ರಾಮದ ಲಕ್ಷ್ಮೀ ದೇವಿ ಹಾಗೂ ಉಪಾಧ್ಯಕ್ಷರಾಗಿ ಕಲ್ಲಹಳ್ಳಿ ನೇತ್ರಾಬಾಯಿ ಅವಿರೋಧವಾಗಿ ಬುಧವಾರ ಆಯ್ಕೆಯಾದರು.
ತಾಪಂ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಲಕ್ಷ್ಮೀದೇವಿ ಹಾಗೂ ನೇತ್ರಾಬಾಯಿ ಅನುಕ್ರಮವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮ ಪತ್ರಸಲ್ಲಿಸಿದ್ದರು. ನಿಗಧಿತ ಅವಧಿಯೊಳಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಸದಸ್ಯರಾರು ನಾಮಪತ್ರ ಸಲ್ಲಿಸದ ಕಾರಣ ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ ಪ್ರಕಾಶ್ ಅವರು ಮಧ್ಯಾಹ್ನ ಒಂದು ಗಂಟೆಗೆ ಫಲಿತಾಂಶವನ್ನು ಪ್ರಕಟಿಸಿ ತಾಪಂ ಅಧ್ಯಕ್ಷರಾಗಿ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷರಾಗಿ ನೇತ್ರಾಬಾಯಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಪ್ರಕಾಶ್ ಕಾರ್ಯನಿರ್ವಹಿಸದರು. ತಾಪಂ ಕಾರ್ಯನಿರ್ವ ಹಣಾಧಿಕಾರಿ ಡಾ.ಕೊಟ್ರೇಶಪ್ಪ ಅವರು ಹಾಜರಿದ್ದು ಚುನಾವಣಾ ಪ್ರಕ್ರಿಯೆ ನಡೆಸಿದರು.
ತಾಪಂ ನಿಕಟಪೂರ್ವ ಅಧ್ಯಕ್ಷೆ ಆಶಾಶ್ರೀಧರ್, ಉಪಾಧ್ಯಕ್ಷೆ ಸರೋಜಮ್ಮ ಹಾಜ್ಯಾನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ಯಶೋಧಮ್ಮ, ಶಮೀನಬಾನು, ಧರ್ಮೆಗೌಡ, ಪ್ರೇಂಕುಮಾರ್, ಅಣ್ಣಾಮಲೈ, ತಿಪ್ಪೇಶ್‌ರಾವ್, ಮಂಜುನಾಥ್, ರುದ್ರಪ್ಪ, ಉಷಾ ಜಗದೀಶ್ ಸೇರಿದಂತೆ ಎಲ್ಲಾ ಸದಸ್ಯರು ಹಾಗೂ ಜಿಪಂ ಸದಸ್ಯ ಮಣಿಶೇಖರ್, ಯೋಗೇಶ್, ನಗರಸಭೆ ಮಾಜಿ ಅಧ್ಯಕ್ಷೆ ಸುಧಾಮಣಿ, ಸದಸ್ಯ ಆನಂದ್ ಮತ್ತು ಭೋವಿ ಸಮಾಜದ ಮುಖಂಡರು ಹಾಜರಿದ್ದು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಕೋರಿದರು.
Get In Touch With Us info@kalpa.news Whatsapp: 9481252093
Discussion about this post