ಭದ್ರಾವತಿ: ತಾಲೂಕಿನ ಹಿರಿಯೂರು ಗ್ರಾಮದ ಮಾನಸಿಕ ಅಸ್ವಸ್ಥ 40 ವರ್ಷದ ಪ್ರಭಾಕರ್ ಎಂಬುವವರು ಹುಟ್ಟಿನಿಂದ ಮಾನಸಿಕ ಅಸ್ವಸ್ಥನಾಗಿದ್ದು, ತಾಯಿ ಜಯಮ್ಮನ ಆಶ್ರಮದಲ್ಲಿ ಬೆಳೆಯುತ್ತಿದ್ದ ಈತನಿಗೆ ಮ್ಯಾನ್ ಕೈಂಡ್ ಟ್ರಸ್ಟ್ ಆಶ್ರಯ ನೀಡಿದೆ.
ಅಸ್ವಸ್ಥ ಪ್ರಭಾಕರ್ ನಿಗೆ ರಕ್ತದೊತ್ತಡ ಹೆಚ್ಚಾದಾಗ ಕೈ ಸಿಕ್ಕ ವಸ್ತುಗಳಿಂದ ತನ್ನ ತಾಯಿಗೆ ರಕ್ತ ಬರುವ ರೀತಿಯಲ್ಲಿ ಒಡೆಯುತ್ತಿದ್ದು, ಈ ಪರಿಸ್ಥಿತಿಯಲ್ಲಿ ತಾಯಿ ಅನಾರೋಗ್ಯದ ಕಾರಣ ಮಗನ ಬಗ್ಗೆ ನಿಗಾವಹಿಸುವುದಕ್ಕೆ ಅಸಾಧ್ಯವಾಗಿದ್ದರ ಕಾರಣದಿಂದ ಪ್ರಭಾಕರ್ ರಸ್ತೆಯ ಬದಿಯ ಬಸ್ ನಿಲ್ದಾಣದಲ್ಲಿ ಇದ್ದು, ಸ್ಥಳೀಯರು ನೀಡಿದ ಉಪಚಾರದಿಂದ ಬದುಕುಕಟ್ಟಿಕೊಳ್ಳಬೇಕಾಯಿತು. ಇದನ್ನರಿತ ಮ್ಯಾನ್ ಕೈಂಡ್ ಟ್ರಸ್ಟ್ ಸದಸ್ಯ ವಿಲ್ಸನ್ ಹಾಗು ಜೋಸೆಪ್ ರವರು ಟ್ರಸ್ಟ್ ನ ಸಂಸ್ಥಾಪಕ ರಾಜು ರವರ ಗಮನಕ್ಕೆ ತಂದು ಎನ್ ಅರ್ ಪುರದ ಮಾನಸಿಕ ಅಸ್ವಸ್ಥರ ದೇವಾಲಯ ಎಂದು ಕರೆಯಲ್ಪಡುವ “ದಿವ್ಯಕಾರುಣ್ಯ ಕಾರುಣ ಆಶ್ರಮ” ಕ್ಕೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post