ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪ್ರತಿಯೊಬ್ಬ ಶಿಕ್ಷಕನು ಗುರುವಾಗಬೇಕು. ಪ್ರತಿಯೊಬ್ಬ ಇಂಜಿನಿಯರ್ ಕಾಯಕಯೋಗಿ ಆಗಬೇಕು ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಜಿ. ನಾರಾಯಣ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭದ್ರಾವತಿಯ ಲಯನ್ಸ್ ಕ್ಲಬ್‌ನಲ್ಲಿ Lions Club ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ಅಭಿಯಂತರರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು, ಪ್ರತಿ ಶಿಕ್ಷಕರು ಎರಡನೇ ಪೋಷಕರು, ಸಮಾಜವನ್ನು ಸರಿದಾರಿಗೆ ತರುವಂತಹ ಜವಾಬ್ದಾರಿ ಹೊತ್ತಿರುವ ಶಿಕ್ಷಕರು ಹಾಗೂ ಅಭಿಯಂತರರ ದಿನಾಚರಣೆಯನ್ನು ಲಯನ್ಸ್ ಕ್ಲಬ್ ಆಚರಿಸುತ್ತಿರುವುದು ಲಯನ್ಸ್ ಕ್ಲಬ್‌ನ ಸಾಮಾಜಿಕ ಹೊಣೆಗಾರಿಕೆಗೆ ಸಾಕ್ಷಿಯಾಗಿದೆ ಎಂದು ನುಡಿದರು.
ಪಿಡಿಜಿ ಲಯನ್ಸ್ ದಿವಾಕರ್ ಶೆಟ್ಟಿ ಸಮಾಜದಿಂದ ಏನನ್ನು ತೆಗೆದುಕೊಳ್ಳದೆ ಸಮಾಜದಲ್ಲಿ ಅಗತ್ಯ ಇರುವವರಿಗೆ ಸೇವೆ ಮಾಡಲು ಇರುವ ಸಂಸ್ಥೆಯ ಲಯನ್ಸ್ ಎಂದು ಶ್ಲಾಘಿಸಿದರು.
ಕಾರ್ಯದರ್ಶಿ ದಿವಾಕರ್ ಮಾತನಾಡಿ, ನಾಗರೀಕರನ್ನು ರೂಢಿಸುವ ಶಿಕ್ಷಕರು ಮತ್ತು ದೇಶವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿರುವ ಪ್ರಾಮಾಣಿಕ ಅಭಿಯಂತರರ ದಿನಾಚರಣೆ, ಇವರ ಮೂಲಕ ಸಮಾಜ ಇನ್ನಷ್ಟು ಜಾಗೃತಿ ಜಾಗೃತವಾಗುತ್ತದೆ. ಇತರರಿಗೂ ಪ್ರೇರಣೆ ನೀಡುವ ಸಣ್ಣ ಪ್ರಾಮಾಣಿಕ ಪ್ರಯತ್ನ ಇದು ಎಂದು ನುಡಿದರು.
Also read: ಶಿವಮೊಗ್ಗದ ಈ ಶಾಲಾ ವಿದ್ಯಾರ್ಥಿಗಳಿಗೆ ಬಂತು ಫೇಸ್ ಬಯೋಮೆಟ್ರಿಕ್ ಹಾಜರಾತಿ
ರೀಜನಲ್ ಅಧ್ಯಕ್ಷ ದೇವರಾಜ್ ಮಾತನಾಡಿ, ಸ್ವಂತ ಹಣದಿಂದ ಸೇವಾ ಕಾರ್ಯ ನಡೆಸುವ ಲಯನ್ಸ್ ಸದಸ್ಯರು ಎಲ್ಲರಿಗೂ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಲಯನ್ ಅಧ್ಯಕ್ಷ ರಾಜೇಶ್, ನಿವೃತ್ತ ಪ್ರಧಾನ ಇಂಜಿನಿಯರ್ ಕಾಂತರಾಜ್, ಉಪನ್ಯಾಸಕ ಡಾ. ಎನ್.ಕೆ. ಹೇಮಕೇಶವ, ಸಂಸ್ಕೃತ ಪ್ರಾಧ್ಯಾಪಕ ಸತ್ಯನಾರಾಯಣ ಭಟ್ಟ, ಸುಣ್ಣದಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಸೌಭಾಗ್ಯ, ಹಾವುಗೊಲ್ಲರ ಕ್ಯಾಂಪ್ ಸರ್ಕಾರಿ ಶಾಲೆಯ ಶಿಕ್ಷಕಿ ಜ್ಯೋತಿ ಇವರನ್ನು ಗೌರವ ಪೂರಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post