ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಉಂಬಳೇಬೈಲು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಕ್ಕರೆಬೈಲು ಆನೆ ಬಿಡಾರದ ಆನೆಗಳೊಂದಿಗೆ ಕಾಡಾನೆಗಳನ್ನು ಓಡಿಸಲು ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ನರಸಿಂಹರಾಜಪುರ ರಸ್ತೆಯಲ್ಲಿ ಕಾಕನಹಸೂಡಿವರಗೆ ಓಡಿಸಲಾಗಿತ್ತು. ಆದರೆ ಮೂರು ಕಾಡಾನೆಗಳು ಕೇವಲ ನಾಲ್ಕೇ ದಿನದಲ್ಲಿ ವಾಪಸ್ ಬಂದಿವೆ.
ಕೈ ತೊಟ್ಟಳು ಗ್ರಾಮದ ಬಾಲಪ್ಪ ಎಂಬ ರೈತರ ಮನೆ ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ರಾತ್ರಿ ನುಗ್ಗಿದ ಆನೆಗಳು ೨೫ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ತಿಂದು ಮುರಿದು ಹಾಕಿವೆ ಎನ್ನಲಾಗಿದೆ.

ಊರಿನ ಗ್ರಾಮಸ್ಥರು ಜಿಲ್ಲಾಡಳಿತ ಮತ್ತು ಅರಣ್ಯ ಅಧಿಕಾರಿಗಳಿಗೆ ಆನೆಗಳನ್ನು ಓಡಿಸುವ ಕಾರ್ಯ ಬೇಡ, ಆನೆಗಳನ್ನು ಹಿಡಿದು ಸ್ಥಳಾಂತರಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















