ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಿಇಟಿ ಪರೀಕ್ಷೆ #CET Exam ತಪಾಸಣೆ ವೇಳೆ ವಿದ್ಯಾರ್ಥಿಯ ಜನಿವಾರ #Janiwara ತೆಗೆಸಿದ್ದನ್ನು ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಭದ್ರಾವತಿ ವಿಪ್ರ #Vipra ಸಂಘಟನೆಯ ಬಳಗದಿಂದ ಇಂದು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರವನ್ನು ತುಂಡರಿಸಿ ದೌರ್ಜನ್ಯ ಮಾಡಿರುವುದನ್ನು ವಿಪ್ರ ಸಂಘಟನೆಯ ಬಳಗದಿಂದ ಖಂಡಿಸುತ್ತೇವೆ. ಸಿಇಟಿ ಪರೀಕ್ಷೆ ನಿಬಂಧನೆಯಲ್ಲಿ ಜನಿವಾರ, ಶಿವದಾರ, ಕಾಶಿದಾರ, ತಾಳಿ, ಕಾಲುಂಗುರ ಯಾವುದನ್ನು ತೆಗೆಯಬೇಕೆಂದು ಎಲ್ಲೂ ನಮೂದಿಸಿರುವುದಿಲ್ಲ. ಆದರೆ ಇತ್ತೀಚೆಗೆ ಶಿವಮೊಗ್ಗ ಮತ್ತು ಬೀದರ್ ಇನ್ನಿತರ ಕಡೆಗಳಲ್ಲಿ ಜನಿವಾರ, ಕಾಶಿದಾರರವನ್ನು ಬಲವಂತವಾಗಿ ಕತ್ತರಿಸಿರುತ್ತಾರೆ. ಇದು ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸವಾಗಿರುತ್ತದೆ ಮನವಿಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳ ಭವಿಷ್ಯದಲ್ಲಿ ಸರಕಾರ ಚೆಲ್ಲಾಟವಾಡುತ್ತಿದೆ. ಇದನ್ನು ವಿಪ್ರ ಬಳಗ ಬಲವಾಗಿ ಖಂಡಿಸುತ್ತೇವೆ. ನಾವು ಸ್ವಾಭಿಮಾನದಿಂದ ಬದುಕುತ್ತಿದ್ದೇವೆ. ಇದಕ್ಕೆ ಅಡ್ಡಿಪಡಿಸುವಂತಹ ಕಾರ್ಯ ಸರ್ಕಾರದಿಂದ ನಡೆಸುವಂತೆ ಕಾಣುತ್ತಿದ ಎಂದು ಅನುಮಾನವಾಗಿರುತ್ತದೆ. ಅಡ್ಡಿಪಡಿಸಿರುವಂತಹ ವ್ಯಕ್ತಿಯನ್ನು ಸರ್ಕಾರ ವಜಾ ಮಾಡುವುದಾಗಲಿ, ಅಮಾನತ್ತುಗೊಳಿಸುವುದಾಗಲಿ ಅಥವಾ ವರ್ಗಾವಣೆ ಮಾಡುವುದಾಗಲಿ ಇದರಿಂದ ಸರ್ಕಾರ ಕೈ ತೊಳೆದು ಕೊಂಡರೆ ಸಾಲದು. ಅವರು ಮಾಡಿದ ತಪ್ಪಿಗೆ ವಂಚಿತರಾದ ವಿದ್ಯಾರ್ಥಿಗೆ ನ್ಯಾಯ ಕೊಡಿಸುವುದರ ಮುಖಾಂತರ ಸರ್ಕಾರದ ಕೋಟದಲ್ಲಿ ಅವರ ಭವಿಷ್ಯಕ್ಕೆ ದಾರಿ ಮಾಡಿಕೊಡಬೇಕೆಂದು ಆಗ್ರಹಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಅಮಾನುಷ ಕೊಲೆಗಳು ಹಾಗೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿಪ್ರ ಬಳಗ ಬಲವಾಗಿ ಖಂಡಿಸುತ್ತೇವೆ. ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಹಿಂದುಗಳಿಗೆ ರಕ್ಷಣೆ ಕೊಡಬೆಕೆಂದು ಈ ಮೂಲಕ ಭದ್ರಾವತಿಯ ಮಿತ್ರ ಬಳಗದ ಸಂಘಟನೆಯ ಎಲ್ಲರೂ ಬಲವಾಗಿ ಕೋರುತ್ತೇವೆ. ಸರ್ಕಾರ ಈ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಮಾನ್ಯ ತಹಸಿಲ್ದಾರ್ ಅವರು ಈ ಮನವಿಯನ್ನು ಸರ್ಕಾರಕ್ಕೆ ಕಳಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಶ್ರೀ ರಾಮೇಶ್ವರ ದೇವಸ್ಥಾನದ ಆಡಳಿತ ಮಂಡಳಿ, ಶಂಕರ ಸೇವಾ ಸಮಿತಿ, ತಾಲೂಕು ಮಧ್ವ ಮಂಡಳಿ, ಶ್ರೀ ವೈಷ್ಣವ ಸಮಾಜ, ಕರಾವಳಿ ವಿಪ್ರ ಬಳಗ ಮತ್ತು ಮಧ್ವ ಮಹಿಳಾ ಮಂಡಳಿ, ಗೋಪಾಲ್ ಆಚಾರ್, ರಮಕಾಂತ್ ನರಸಿಂಹಾಚಾರ್, ನಂಜುಂಡಯ್ಯ, ನಟರಾಜ್, ಸುಬ್ರಹ್ಮಣ್ಯ, ಜಯತೀರ್ಥ, ರಾಮಚಂದ್ರ, ಮಂಜುಳಾ, ಸುಮಾ ರಾಘವೇಂದ್ರ, ವಿಜಯ ನಟರಾಜ್, ರಮಾಕಾಂತ, ವಾದಿರಾಜ, ನಿರಂಜನ್, ಹನುಮಂತ ರಾವ್, ನರಸಿಂಹಾಚಾರ್ಯ ಇತರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post