ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿರವರು #H D Kumaraswamy ಭದ್ರಾವತಿಯ ವಿಐಎಸ್‌ಎಲ್ #VISL ಕಾರ್ಖಾನೆಯ ಪುನಶ್ಚೇತನಕ್ಕಾಗಿ ಸುಮಾರು 8 ರಿಂದ 10 ಸಾವಿರ ಕೋಟಿ ರೂಪಾಯಿ ಬಂಡವಾಳ ತೊಡಗಿಸುವುದರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು #PM Narendra Modi ಕರೆತಂದು ಶಂಕುಸ್ಥಾಪನೆ ನೆರವೇರಿಸುವುದಾಗಿ ಕಳೆದ ಮೇ 23ರಂದು ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಅಧಿಕೃತವಾಗಿ ಘೋಷಿಸಿದ್ದರು ಇದರ ಮುಂದುವರೆದ ಭಾಗವಾಗಿ ಶುಕ್ರವಾರ ಕೇಂದ್ರ ಭಾರತೀಯ ಉಕ್ಕು ಪ್ರಾಧಿಕಾರದ (ಸೈಲ್) ಅಧ್ಯಕ್ಷರಾದ ಅಮರೇಂದ್ ಪ್ರಕಾಶ್,ಉಕ್ಕುಸಚಿವಾಲಯದ ಕಾರ್ಯದರ್ಶಿ ಸಂದೀಪ್‌ಪೌಂಡ್ರಿಕ್ ಹಾಗೂ ಜಂಟಿ ಕಾರ್ಯದರ್ಶಿ ಅಭಿಜಿತ್ ನರೇಂದ್ರ ಅವರು ಗಳನ್ನೊಳಗೊಂಡ ಉನ್ನತ ಅಧಿಕಾರಿಗಳ ನಿಯೋಗ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿನೀಡಿ ವಿವಿಧಪ್ಲಾಂಟ್‌ಗಳನ್ನು ವೀಕ್ಷಿಸಿ ಸಭೆ ನಡೆಸಿದರು.
ಬೆಳಿಗ್ಗೆ 11.30ರ ಸುಮಾರಿಗೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದು ನಂತರ ಮಧ್ಯಾಹ್ನ ವಿಐಎಸ್‌ಎಲ್ ಕಾರ್ಖಾನೆಗೆ ಆಗಮಿಸಿದ ನಿಯೋಗದವರನ್ನು ಕರ್ಖಾನೆಯ ಅಧಿಕಾರಿಗಳು ಹಾಗೂ ಕಾರ್ಮಿಕ ಸಂಘದವರು ಮತ್ತು ಗುತ್ತಿಗೆಕಾರ್ಮಿಕರು ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು. ಕಾರ್ಖಾsನೆ ಆವರಣದಲ್ಲಿರುವ ಸರ್.ಎಂ.ವಿಶ್ವೇಶ್ವರಯ್ಯನವರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಸಲ್ಲಿಸಿದ ನಂತರ ಕಾರ್ಖಾನೆಯೊಳಗಿರುವ ಪ್ರೈಮರಿಮಿಲ್, ಎಸ್‌ಎಂಎಸ್‌ಮಿಲ್, ಫೋರ್ಜ್‌ಪ್ಲಾಂಟ್, ಮೆಷಿನ್‌ಷಾಪ್, ಬ್ಲಾಸ್ಟ್ ಫರ್ನೇಸ್, ಸೇರಿದಂತೆ ವಿವಿದ ವಿಭಾಗಗಳಿಗೆ ಬೇಟಿನೀಢಿ,ಯಂತ್ರೋಪಕರಣಗಳ ಸಿಥಿತಿಗತಿಯ ಕಾರ್ಕಾಯ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್.ಚಂದ್ವಾನಿ , ಮುಖ್ಯ ಮಹಾ ಪ್ರಬಂಧಕ ಸ್ಥಾವರ ಸುರೇಶ್ ಸ್ಭೆರಿದಂತೆ ಅಲ್ಲಿಹಾಜರಿದ್ದ ಅಧಿಕಾರಿಗಳಿಂದ ಮಾಹಿತಿ ಪಡದುಕೊಂಡರು.

ಮ್ಯೂಸಿಯಂ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರದ ಹಿರಿಯ ಅಧಿಕಾರಿಗಳು ಸಂಜೆ 4.30ರ ಸುಮಾರಿಗೆ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು.
ಹಿರಿಯ ಅಧಿಕಾರಿಗಳ ಭೇಟಿಮತ್ತು ಭರವಸೆಯಮಾತುಗಳು ಇಲ್ಲಿನ ಕಾರ್ಮಿಕ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಕಾರ್ಖಾನೆಯ ಪುಶ್ಚೇತನದ ಕನಸು ನನಸಾಗುವ ಆಶಾಭಾವನೆ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post