ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಮತದಾನದ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಗರಸಭಾ ಕಚೇರಿ ಆವರಣದಲ್ಲಿ ಮತದಾರರ ಪ್ರತಿಜ್ಞಾ ವಿಧಿಯೊಂದಿಗೆ ಮತದಾರರಿಗೆ ಮತದಾನದ ಜಾಗೃತಿ ಮತ್ತು ಅರಿವು SVEEP (Systematic Voters Education and Electoral Particiapation ) ಮೂಡಿಸುವ ಕಾರ್ಯಕ್ರಮಕ್ಕೆ ಪೌರಾಯುಕ್ತ ಮನುಕುಮಾರ್ ಚಾಲನೆ ನೀಡಿದರು.
ಕಚೇರಿ ವ್ಯವಸ್ಥಾಪರು ಹಾಗೂ ಲೆಕ್ಕ ಅಧೀಕ್ಷಕರಾದ ಎಂ. ಸುನಿತಾ ಕುಮಾರಿ, ಸಮುದಾಯ ಸಂಘಟನಾಧಿಕಾರಿ ಎಂ. ಸುವಾಸಿನಿ, ಕಂದಾಯಾಧಿಕಾರಿ ಎಂ.ಎಸ್. ರಾಜಕುಮಾರ್ ಮತ್ತು ಕಚೇರಿಯ ನೌಕರರುಗಳು ಹಾಗೂ ಸಾರ್ವಜನಿಕರುಗಳು ಭಾಗವಹಿಸಿದ್ದರು.
Also read: ಶಿವಮೊಗ್ಗದಲ್ಲಿ ದಾಖಲೆಯಿಲ್ಲದ ಬರೋಬ್ಬರಿ 9 ಕೆಜಿ ಚಿನ್ನ ವಶ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















