ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಜಮೀರ್ ಎಂಬ ಯುವಕನ ಶವ ಇಂದು ಭದ್ರಾ ನದಿಯಲ್ಲಿ ಪತ್ತೆಯಾಗಿದ್ದು, ಇದು ಹತ್ಯೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಟಿವಿ ಅಂಗಡಿಯೊಂದರಲ್ಲಿ ಇತ್ತೀಚೆಗಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ ಜಮೀರ್ ಟಿವಿ ರಿಪೇರಿ ಮಾಡಲು ತೆರಳಿದ್ದು ಎರಡು ದಿನಗಳ ಹಿಂದಿನ ರಾತ್ರಿಯಿಂದಲೂ ಕಾಣೆಯಾಗಿದ್ದ. ಆದರೆ, ಇಂದು ಮುಂಜಾನೆ ತರೀಕರೆ ರಸ್ತೆಯ ಅಯ್ಯಪ್ಪ ದೇವಾಲಯದ ಹಿಂಭಾಗದ ಭದ್ರಾ ನದಿಯಲ್ಲಿ ಆತನ ಶವ ದೊರೆತಿದ್ದು, ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ಹೊಸಮನೆ ಪೊಲೀಸರು ಭೇಟಿ ನೀಡಿದ್ದು, ಜಮೀರ್ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
Also read: ಭದ್ರಾವತಿ: ದಸರಾ ಕುಸ್ತಿ ಪಂದ್ಯಾವಳಿಗೆ ಪೌರಾಯುಕ್ತ ಮನುಕುಮಾರ್ ಚಾಲನೆ
ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ:
ಇನ್ನು, ಘಟನೆ ಹಿನ್ನೆಲೆಯಲ್ಲಿ ನೂರಾರು ಮಂದಿ ರಂಗಪ್ಪ ವೃತ್ತ ಹಾಗೂ ಹೊಸಮನೆ ಪೊಲೀಸ್ ಠಾಣೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ನೂರಾರು ಮಂದಿ ನೆರೆದಿದ್ದು, ಜಮೀರ್ ಸಾವಿಗೆ ನ್ಯಾಯ ಒದಗಿಸಬೇಕು, ಆರೋಪಿಗಳನ್ನು ತತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post