ಭದ್ರಾವತಿ: ಸೋಡಾ ಮಾರಾಟ ವ್ಯಾನ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ನಡೆದಿದೆ.
ಜಯಶ್ರೀ ವೃತ್ತದ ಬಳಿ ಹಿಮಾಲಯಾಸ್ ಸೋಡಾ ವ್ಯಾನ್ ನಲ್ಲಿ ಪ್ರತಿದಿನ ಸೋಡಾ ವ್ಯಾಪಾರ ನಡೆಸಲಾಗುತ್ತಿದ್ದು, ಸಂಜೆ ವ್ಯಾಪಾರ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ವ್ಯಾನ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ತಯಾರಿಕೆ ಯಂತ್ರ ಹಾಗೂ ಇನ್ನಿತರ ವಸ್ತುಗಳು ಬೆಂಕಿಗಾಹುತಿಯಾಗಿದೆ.
ರಸ್ತೆಯಲ್ಲಿಯೇ ಕೆಲ ಹೊತ್ತು ಬೆಂಕಿ ಧಗಧಗ ಹೊತ್ತಿ ಉರಿಯಿತು. ಇದರಿಂದಾಗಿ ಕೆಲ ಕ್ಷಣ ಆತಂಕದ ವಾತಾವರಣ ನಿರ್ಮಾಣವಾಯಿತು.
ತಕ್ಷಣ ಬೆಂಕಿ ನಂದಿಸಲಾಯಿತು. ಇದರಿಂದಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
Discussion about this post