ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕಳೆದ ಒಂದು ವಾರದಿಂದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಂಘಟನೆಯು ತಾಲೂಕಿನಲ್ಲಿ ಕೊರೋನಾದಿಂದ ಬಾಧಿತರಾದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಮತ್ತು ಸುಬ್ಬಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆಯನ್ನು ಮತ್ತು ರೋಗಿಯ ಕುಟುಂಬದವರಿಗೆ ಅತ್ಮಸ್ಥೈರ್ಯ ತುಂಬುವುದರ ಜೊತೆಗೇ ಅವರ ನೋವಿನಲ್ಲಿ ಜೊತೆಯಾಗಿ ನಿಂತಿರುವ ಕೆಲಸವನ್ನು ಬಜರಂಗದಳ ಕಾರ್ಯಕರ್ತರು ಮಾಡಿಕೊಂಡು ಬಂದಿರುತ್ತಾರೆ.
ಹಾಗೇ ಕೊರೋನಾದಿಂದ ಮೃತಪಟ್ಟ ಶವಗಳನ್ನು, ಅದರಲ್ಲೂ ಬಡ ಕುಟುಂಬದ ಶವಗಳನ್ನು ಸ್ವಂತ ಖರ್ಚಿನಲ್ಲಿ ಕುಟುಂಬದವರ ಸಮ್ಮುಖದಲ್ಲೇ ಗೌರವ ಪೂರ್ವಕವಾಗಿ ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ.
ಮೃತ ಕುಟುಂಬದವರಿಗೆ ಸಾಂತ್ವನ, ದೈರ್ಯ ಮತ್ತು ಅತ್ಮಸ್ಥೈರ್ಯ ತುಂಬಿ ಅವರ ನೋವಿನಲ್ಲೂ ಜೊತೆಯಾಗಿ ನಿಲ್ಲುವ ಕೆಲಸವನ್ನು ಬಜರಂಗದಳ ಕಾರ್ಯಕರ್ತರು ಮಾಡುತ್ತಾ ಬಂದಿದ್ದಾರೆ.
ಮುಂದಿನ ದಿನಗಳಲ್ಲಿ ಬಡವರ ಶವ ಸಂಸ್ಕಾರಕ್ಕೆ ಬೇಕಾಗುವ ಸೌದೆಗಳನ್ನು ಉಚಿತವಾಗಿ ನೀಡಲು 20 ಟನ್ ಸೌದೆ ಸಂಗ್ರಹದಲ್ಲಿ ನಿರತರಾಗಿದ್ದಾರೆ. ಹಾಗೂ ನಗರದಲ್ಲಿ ಈ ಕೊರೋನಾ ಎಂಬಾ ಮಹಾಮಾರಿಯಿಂದ ತೊಂದರೆ ಆಗುವ ಪ್ರತಿಯೊಬ್ಬರಿಗೂ ಸೇವಾ ಮನೋಭಾವದಲ್ಲಿ ಸಹಾಯ ಮಾಡುವ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಯು ತೀರ್ಮಾನ ಮಾಡಿದ್ದು ಅದಕ್ಕೆ ಪೂರ್ವಕವಾಗಿ ಕಾರ್ಯಕರ್ತರ ಪಡೆಯು ಎಲ್ಲಾ ತಯಾರಿಯಲ್ಲಿ ತೊಡಗಿಕೊಂಡಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post